ಕುಂದಾಪುರ : ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ‘ವಿ-ಗ್ರೋ’ ಬ್ಯುಸಿನೆಸ್ ಡೇ ಇದರ ಮೊದಲನೇ ಹಂತದ ವ್ಯವಹಾರ ಯೋಜನೆ ಪ್ರಸ್ತುತಿ ಕಾರ್ಯಕ್ರಮ ಜರುಗಿತು.
ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ವ್ಯವಹಾರ ಜ್ಞಾನವನ್ನು ಹೊಸ ಯೋಜನೆಗಳೊಂದಿಗೆ ಕ್ರಿಯಾ ಯೋಜನೆಯನ್ನು ಪ್ರಸ್ತುತ ಪಡಿಸುವ ಮೂಲಕ ಕೌಶಲ್ಯ ಅಭಿವೃದ್ದಿಗೆ ಇದೊಂದು ಸೂಕ್ತ ವೇದಿಕೆಯಾಗಿದೆ.
ತೀರ್ಪುಗಾರರಾದ ಸಿ.ಎ. ತನುಷ ಡಿ. ರಾವ್ ನಿರ್ದೇಶಕರು, ಮ್ಯಾಟ್ರಿಕ್ಸ್ ಮಾಸ್ಟರ್ ಬೆಂಗಳೂರು, ಸುದರ್ಶನ್ ಶೆಟ್ಟಿ ಸಿನಿಯರ್ ಏಜೆನ್ಸಿ ಮ್ಯಾನೆಜರ್ SಃI ಬ್ಯಾಂಕ್, ಬೆಂಗಳೂರು ಮತ್ತು ಅನಿಶ್ ಶೆಟ್ಟಿ ಸಾಫ್ಟವೇರ್ ಇಂಜಿನಿಯರ್, ವಿಕ್ಟೋರಿಯಾ ಸೀಕ್ರೆಟ್ ಬೆಂಗಳೂರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಪ್ರಾರ್ಥಿಸಿದರು. ಉಪಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ಭಟ್ ಪ್ರಾಸ್ತಾವಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಅಕ್ಷಯ್ ಕುಮಾರ್ ವಂದಿಸಿ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಜೋಸಲಿನ್ ರೆನಿಟಾ ಅಲ್ಮೇಡಾ ಕಾರ್ಯಕ್ರಮವನ್ನು ನಿರೂಪಿಸಿದರು.