ಮಧ್ಯಪ್ರದೇಶ : ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಿದೆ ಮತ್ತು ಇದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ಮಾತ್ರ ವೈಯಕ್ತಿಕ ಕಾನೂನುಗಳನ್ನೇ ಪ್ರತಿಪಾದಿಸುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.
ರಾಹುಲ್ ಬಾಬಾ ತುಷ್ಟಿಕರಣಕ್ಕಾಗಿ ನೀವು ಏನು ಬೇಕಾದರು ಮಾಡಿಕೊಳ್ಳಿ. ಆದರೆ ಬಿಜೆಪಿ ಅಧಿಕಾರದಲ್ಲಿರುವ ತನಕ ವೈಯಕ್ತಿಕ ಕಾನೂನು ಜಾರಿಗೆ ಅವಕಾಶ ಕೊಡದು. ಉತ್ತರಾಖಂಡದಂತೆ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿಯೇ ಸಿದ್ಧ. ಇದು ನಮ್ಮ ಭರವಸೆ ಮತ್ತು ಪ್ರಧಾನಿ ಮೋದಿಯವರ ಗ್ಯಾರಂಟಿ ಎಂದು ಪುನರುಚ್ಚರಿಸಿದರು. ಮೋದಿ ಸರ್ಕಾರ ಮಧ್ಯಪ್ರದೇಶ ಸಹಿತ ಇಡೀ ದೇಶವನ್ನು ನಕ್ಸಲ್ ಹಾವಳಿ ಹಾಗೂ ಭಯೋತ್ಪಾದನೆಯಿಂದ ಮುಕ್ತಗೊಳಿಸಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು 2019ರಲ್ಲಿ ಒಂದೇ ದೃಢ ನಿರ್ಧಾರದಿಂದ ಪ್ರಧಾನಿ ಮೋದಿ ರದ್ದುಗೊಳಿಸಿದರು ಎಂದು ಶಾ ನುಡಿದರು