ಪುರುಲಿಯಾ/: ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿರುವ ಟೀಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಟಿಎಂಸಿ ತನ್ನ ಮುಸ್ಲಿಂ ವೋಟ್ ಬ್ಯಾಂಕ್ ಅನ್ನು ಸಮಾಧಾನಪಡಿಸಲು ಈ ಸಾಮಾಜಿಕ-ಧಾರ್ಮಿಕ ಸಂಘಟನೆಗಳ ವಿರುದ್ಧ ಬೆದರಿಕೆ ಹಾಕಲು ಆರಂಭಿಸಿದೆ’ ಎಂದು ಗುಡುಗಿದ್ದಾರೆ. ಎಷ್ಟು ಧೈರ್ಯ ನಿಮಗೆ ಇಂಥ ಹೇಳಿಕೆ ನೀಡಲು ಎಂದು ಕೇಳಿದ್ದಾರೆ.
ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಟಿಎಂಸಿ ತುಂಬಾ ಕೆಳಮಟ್ಟಕ್ಕಿಳಿಯುವ ಮೂಲಕ ಸಭ್ಯತೆಯ ಮಿತಿ ದಾಟಿದೆ. ಅದು ಇಸ್ಕಾನ್, ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು.