Home » ತ್ರಾಸಿ : ಉರಿಯದ ಬೀದಿ ದೀಪಗಳು
 

ತ್ರಾಸಿ : ಉರಿಯದ ಬೀದಿ ದೀಪಗಳು

ಅಪಘಾತಕ್ಕೆ ಆಹ್ವಾನ

by Kundapur Xpress
Spread the love

ಬೈಂದೂರು : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ 66 ರ ತ್ರಾಸಿ ಸರ್ಕಲ್ ಬಳಿಯಿಂದ ಗಂಗೊಳ್ಳಿ ಪೊಲೀಸ್ ಠಾಣಾ ಸಂಪರ್ಕಿಸುವ ಪ್ಲೇ ಓವರ್ ವರೆಗೆ ವಿದ್ಯುತ್ ಕಂಬಗಳ ಲೈಟ್ ನಿವಾರಣೆ ಕೊರತೆಯಿಂದ ಕಂಬದಲ್ಲಿ ಲೈಟ್ ಇದ್ದು ಯಾವುದೇ ಬೆಳಕು ಉರಿಯದೆ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಯೋಜನಕ್ಕಿಂತ ಹೆಚ್ಚು ತೊಂದರೆಯಾಗಿ ಪರಿಣಮಿಸಿದೆ,ಹೌದು ಅದರಲ್ಲೂ ತ್ರಾಸಿಗೆ ಆಗಮಿಸುವಂತ ಪ್ರವಾಸಿಗರಿಗೆ ಕವಿದಿದೆ ಕತ್ತಲ ಕೂಪವಾಗಿ ಪರಿಣಮಿಸಿದ್ದಂತೂ ! ಸತ್ಯ.ತ್ರಾಸಿ ಬೀಚ್ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಪ್ರವಾಸಿ ತಾಣ ಇದಾಗಿದ್ದು ದಿನನಿತ್ಯ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಕೈ ಬಿಸಿ ಕರೆಯುವ ಪ್ರವಾಸಿ ತಾಣ ಇದಾಗಿದ್ದು ಆದರೆ ಕತ್ತಲಾಗುತ್ತಿದ್ದಂತೆ ತ್ರಾಸಿ ರಾಷ್ಟ್ರೀಯ ಹೆದ್ದಾರಿಯ ವಿದ್ಯುತ್ ಕಂಬಗಳ ದಾರಿದೀಪ ಬೆಳಗದೆ ಪ್ರವಾಸಿಗರನ್ನು ಕತ್ತಲಲ್ಲಿ ಸ್ವಾಗತಿಸುತಿದೆ ! ಎಂಬುವುದೇ ಮುಜುಗರವಾಗುತ್ತಿದೆ ಎಂದು ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟವರಿಗೆ ಇಡೀ ಶಾಪವಾಗುತ್ತಿದ್ದಾರೆ,ಇನ್ನಾದರೂ ತ್ರಾಸಿ ಗೆ ಆಗಮಿಸುವಂತ ಪ್ರವಾಸಿಗರಿಗೆ ಹಾಗೂ ವಾಹನ ಸವಾರರಿಗೆ ಕಂಟಕವಾಗಿರುವ ರಾಷ್ಟ್ರೀಯ ಹೆದ್ದಾರಿಯ ವಿದ್ಯುತ್ ಕಂಬದ ದೀಪಗಳು ಉರಿಯುವಂತಾಗಲಿ ಎಂಬುದೇ ನಮ್ಮ ಆಶಯ 

ವರದಿ : ದಾಮೋದರ ಮೊಗವೀರ ಬೈಂದೂರು

   

Related Articles

error: Content is protected !!