ವಾಷಿಂಗ್ಟನ್ : ಅಮೆರಿಕದಲ್ಲಿ ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಪೈಪೋಟಿ ಜೋರಾಗಿದೆ. ಈ ನಡುವೆಯೇ ಕಮಲಾ ಹ್ಯಾರಿಸ್ ಅವರು ಟ್ರಂಪ್ ಗಿಂತ ಮುನ್ನಡೆ ಸಾಧಿಸಬಹುದು ಎಂದು ಸಿ ಎನ್ ಎನ್ ಮತ್ತು ಎಸ್ಎಸ್‌ಆರ್‌ಎಸ್ ಸಂಸ್ಥೆ ನಡೆಸಿದ ಸಮೀಕೆ ಹೇಳಿದೆ. ಸಿಎನ್‌ಎನ್ ಸೆ. 19 ರಿಂದ 22 ರ ಅವಧಿಯಲ್ಲಿ ಈ ಸಮೀಕ್ಷೆಯನ್ನು ನಡೆಸಿದ್ದು, ಕಮಲಾ ಗೆಲ್ಲುವ ಸಾಧ್ಯತೆ ಶೇ. 48ರಷ್ಟು ಹಾಗೂ ಟ್ರಂಪ್ ಗೆಲ್ಲುವ ಸಾಧ್ಯತೆ ಶೇ.47ರಷ್ಟು ಎಂದಿದೆ. 2,074 ಮತಗಳನ್ನು ಸಿಎನ್‌ಎನ್ ಈ ಸಮೀಕ್ಷೆಗೆ ಪರಿಗಣಿಸಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 6 ವಾರಗಳಷ್ಟೇ ಬಾಕಿ ಉಳಿದಿದೆ…