ಮಕ್ಕಳ ಕಫಾ ಆರೋಗ್ಯ ಕಾಪಾಡಿ
ಕುಂದಾಪುರ : ಒಂದರಿಂದ ನಾಲ್ಕು ವರ್ಷದ ಮಕ್ಕಳು 16 ಘಂಟೆ, 4 ರಿಂದ 8 ವರ್ಷದ ಮಕ್ಕಳು 12 ರಿಂದ 14 ಘಂಟೆ, 8 ರಿಂದ 14 ವರ್ಷದ ಮಕ್ಕಳು 8 ರಿಂದ 9 ಘಂಟೆ ನಿದ್ರೆ ಮಾಡಬೇಕು ನಿದ್ರೆ ಕಡಿಮೆ ಆದರೆ ಕಫ ವಿಕಾರವಾಗಿ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಹಠ ಸಿಡುಕುತನ ಕೋಪ ನಕಾರಾತ್ಮಕತೆ ಹೆಚ್ಚುವುದು.ಮಕ್ಕಳನ್ನು ಬೇಗ ಮಲಗಿಸಿ ಮಸ್ತಿಷ್ಕ ಕಫದ ನಿಯಂತ್ರಣ ದಲ್ಲಿರುವುದರಿಂದ ಕಫ ವಿಕಾರದಿಂದ ಮಕ್ಕಳು ಮಾತು ಕೇಳುವುದಿಲ್ಲ ಕಫ ವಿಕಾರದಿಂದ ಓದು ತಲೆಗೆ ಹತ್ತುವುದಿಲ್ಲ 4 ವರ್ಷದೊಳಗಿನ ಮಕ್ಕಳಿಗೆ ಪ್ರತಿದಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸಬೇಕು. ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕಫ ಸಂತುಲನ ದಲ್ಲಿರುವುದು ಕಫದ ಮುಖ್ಯ ಕೇಂದ್ರ ತಲೆ ಕಿವಿ ಮತ್ತು ಕಣ್ಣುಗಳು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಬೇಕು. ಕಣ್ಣಿಗೆ ಕಾಜಲ್ ಹಚ್ಚಿದರೆ ಕಫ ಕಡಿಮೆ ಆಗುವುದು. ಮನೆಯಲ್ಲಿ ತಯಾರಿಸಿದ ಕಾಜಲ್ ಹಚ್ಚಬೇಕು. ಬೆಣ್ಣೆ ತುಪ್ಪ ಎಣ್ಣೆ ಬೆಲ್ಲ ಇವು ಕಫ ವಿಕಾರವನ್ನು ಕಮ್ಮಿ ಮಾಡುತ್ತವೆ. ಮೈದಾ ಹಿಟ್ಟಿನ ಯಾವುದೇ ತಿಂಡಿಯನ್ನು ಕೊಡಬಾರದು. ಪೇಸ್ಟ್ ಮತ್ತು ಸೋಪಿನಲ್ಲಿರುವ ಕಾಸ್ಟಿಕ್ ಸೋಡಾ ಕಫ ಕೆರಳಿಸುವುದರಿಂದ ಅದರ ಉಪಯೋಗ ನಿಲ್ಲಿಸುವುದು ಉತ್ತಮ ಮನೆಯಲ್ಲೇ ತಯಾರಿಸಿದ ಕಡಲೆ ಹಿಟ್ಟು, ಚಂದನದ ಪುಡಿ ಯನ್ನು ಹಾಲಿನೊಂದಿಗೆ ಕರಡಿ ಅದನ್ನು ಹಚ್ಚಿ ಸ್ನಾನ ಮಾಡಿಸುವುದು ಅತ್ಯಂತ ಲಾಭಕಾರಿ ಮಧ್ಯಾಹ್ನದ ಊಟಕ್ಕೆ ತುಪ್ಪ ಬಳಸಿದರೆ ಅತೀ ಉತ್ತಮ.ರಾತ್ರಿ ಅರ್ಧ ಚಮಚ ಎಣ್ಣೆ ತಲೆಗೆ ಹಾಕಿ ಅಂಗಾಲಿಗೆ ಸ್ವಲ್ಪ ಎಣ್ಣೆ ಉಜ್ಜಿ ಮಲಗಿಸಿದರೆ ಶಾಂತ ಚಿತ್ತರಾಗುವರು ರಾತ್ರಿ ಜೋ…. ಜೋ….. ಹೇಳಿ ಮಲಗಿಸಿ.
ಸ್ವರ್ಣಾನಂದಾ ಕುಂದಾಪುರ