Home » ಬೈಕ್‌ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು
 

ಬೈಕ್‌ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು

by Kundapur Xpress
Spread the love

ಕುಂದಾಪುರ : ಗಂಗೊಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಅರಾಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕೊಂದು ಅಶೋಕ್‌ ಲೈಲ್ಯಾಂಡ್‌ ಮಿನಿ ಗೂಡ್ಸ್‌ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ

ಬೆಂಗಳೂರಿನ ನಿವಾಸಿಯಾಗಿರುವ ರಂಜಿತ್‌ ಬಲ್ಲಾಳ್‌ ಎಂಬವರು ತನ್ನ ಸಹಚರರೊಂದಿಗೆ ಗೋವಾ ಪ್ರವಾಸವನ್ನು ಮುಗಿಸಿ ಮಂಗಳೂರಿಗೆ ವಾಪಾಸ್ಸು ಬರುತ್ತಿರುವಾಗ ಗಂಗೊಳ್ಳಿ ಸಮೀಪದ ಆರಾಟೆ ( ಮೂವತ್ತುಮುಡಿ) ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಕಾಎಕಿ ಮಿನಿ ಗೂಡ್ಸ್‌ ವಾಹನವು ಅಡ್ಡ ಬಂದ ಪರಿಣಾಮ ನಡೆದ ಅಪಘಾತದಲ್ಲಿ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ

ಸಹಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ

ಅಪಘಾತದಿಂದ ಆರಾಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದ್ದು ಗಂಗೊಳ್ಳಿ ಠಾಣಾ ಉಪ ನಿರೀಕ್ಷಕರಾದ ಹರೀಶ್‌ ಆರ್‌ ಹಾಗೂ ಸಿಬ್ಬಂದಿಗಳಾದ ವಿಠ್ಠಲ್‌ ದಿನೇಶ್‌ ಮತ್ತು ರಾಮಚಂದ್ರರವರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು

 

Related Articles

error: Content is protected !!