Home ಶಿಕ್ಷಣಮಕ್ಕಳ ಪರ್ವ – 2025

ಮಕ್ಕಳ ಪರ್ವ – 2025

by Kundapur Xpress
ತೆಕ್ಕಟ್ಟೆ : ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆ ಇಲ್ಲಿ ಮಕ್ಕಳ ವಾರ್ಷಿಕ ಸಂಭ್ರಮ “ಮಕ್ಕಳ ಪರ್ವ – 2025 “ ಬುಧವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್‌ನ ಪ್ರಾದೇಶಿಕ ಕಛೇರಿ ಉಡುಪಿಯ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಶ್ರೀ ರಮೇಶ್‌ ವೈದ್ಯ  ಮಕ್ಕಳ ಪರ್ವದಲ್ಲಿ ಮಕ್ಕಳ ಪ್ರತಿಭೆ ಅರಳಿ, ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಶಕ್ತಿಯನ್ನು ಪ್ರದರ್ಶಿಸುವ ವಿಶಿಷ್ಟ ವೇದಿಕೆ ಎಂದರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಕಿಶೋರ್‌ ಕುಮಾರ್‌ ಪುತ್ತೂರು ವಿಧಾನ ಪರಿಷತ್‌ ಸದಸ್ಯರು ಕರ್ನಾಟಕ ಸರಕಾರ.  ಶ್ರೀ ರವಿಚಂದ್ರ ಶೆಟ್ಟಿ ತಲ್ಲೂರು ದೊಡ್ಮನೆ , ಮಾನ್ಯ ಸಂಘ ಚಾಲಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕುಂದಾಪುರ ತಾಲೂಕು. ಶಾಲಾ ಆಡಳಿತ ಮಂಡಳಿಯ ಗೌರವ ಅದ್ಯಕ್ಷರಾದ ಶ್ರೀ ಸಂಜೀವ ಜಿ. ಗುಂಡ್ಮಿ ಉಪನ್ಯಾಸಕರು ಕೋಟ, ಮುಖ್ಯೋಪಾದ್ಯಾಯರಾದ  ಶ್ರೀ ಹರ್ಷ ಕೋಟೇಶ್ವರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅದ್ಯಕ್ಷರಾದ ಶ್ರೀ ಸುರೇಶ್‌ ಬೆಟ್ಟಿನ್‌ ವಹಿಸಿದ್ದರು. ಸಂಚಾಲಕರಾದ ಶ್ರೀ ಕಮಲಾಕ್ಷ ಪೈ ಸ್ವಾಗತಿಸಿ , ಶ್ರೀಮತಿ ಸಂಧ್ಯಾ ಭಟ್‌ ವಂದಿಸಿದರೆ,  ಶ್ರೀಮತಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

Related Articles