Home » ಸಿದ್ದಾಪುರ : ಅಂಪಾರು ಭೀಕರ ರಸ್ತೆ ಅಪಘಾತ
 

ಸಿದ್ದಾಪುರ : ಅಂಪಾರು ಭೀಕರ ರಸ್ತೆ ಅಪಘಾತ

by Kundapur Xpress
Spread the love

ಕುಂದಾಪುರ : ತಾಲ್ಲೂಕಿನ ಅಂಪಾರು ಗ್ರಾಮದ ಬಾಲ್ಕಟ್ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎರಡೂವರೆ ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಶನಿವಾರ ಸಂಜೆ ಸಂಭವಿಸಿದೆ.ಕುಂದಾಪುರ ಶಿವಮೊಗ್ಗ ರಾಜ್ಯ ಹೆದ್ದಾರಿಯ ಅಂಪಾರು ಸಮೀಪ ಸಿದ್ದಾಪುರದ ಕಡೆಗೆ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬಲ ಚರಂಡಿಗೆ ತಾಗಿ ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕ ರಾಘವೇಂದ್ರ ಆಚಾರ್, ಅವರ ಪತ್ನಿ ತುಳಸಿ ಹಾಗೂ ಎರಡೂವರೆ ವರ್ಷದ ಮಗು ಅಯಾನ್ಶ್ ಪ್ರಯಾಣಿಸುತ್ತಿದ್ದರು.

ಅಪಘಾತ ನಡೆದ ತಕ್ಷಣ ಸ್ಥಳೀಯರು ವಾಹನ ಸವಾರರು ಮಗುಚಿ ಬಿದ್ದ ಕಾರನ್ನು ಎತ್ತಿ ಕಾರಿನಲ್ಲಿದ್ದವರನ್ನು ಹೊರತೆಗೆದಿದ್ದಾರೆ. ರಾಘವೇಂದ್ರ ಆಚಾರ್ ದಂಪತಿಗಳಿಗೆ ಗಾಯವಾಗಿದ್ದು, ಮಗು ತೀವ್ರವಾಗಿ ಗಾಯಗೊಂಡಿತ್ತು. ತಕ್ಷಣ ಎಲ್ಲರನ್ನೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಮಗು ಆಗಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!