ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಯಡಾಡಿ-ಮತ್ಯಾಡಿಯಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ ಹುಣಸೆಮಕ್ಕಿ ಹೆಗ್ಡೆ ಹೌಸ್‌ನಲ್ಲಿ ಆಯೋಜಿಸಿದ ಕೆಸರಲ್ಲೊಂದಿನ ಕಾರ್ಯಕ್ರಮ ಗಮನ ಸೆಳೆಯಿತು. ಎನ್.ಎಸ್.ಎಸ್. ಸ್ವಯಂಸೇವಕರು ವಿಶಾಲ ಗದ್ದೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಗ್ರಾಮಸ್ಥರ ಮನಗೆದ್ದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಮತ್ತು ಉದ್ಯಮಿಗಳಾದ ಶ್ರೀಮತಿ ವಸಂತಿ ಎಮ್. ಶೆಟ್ಟಿ ಅವರು ಉದ್ಘಾಟಿಸಿದರು. ಉದ್ಯಮಿಗಳಾದ ಶ್ರೀ ಸಬ್ಲಾಡಿ ಮಂಜಯ್ಯ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ ಆಶಯನುಡಿಗಳನ್ನಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರರಾದ ಲಯನ್ ಬಿ. ಅರುಣ್ ಕುಮಾರ್ ಹೆಗ್ಡೆ, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಎನ್. ನಾರಾಯಣ್ ನಾಯಕ್, ಹುಣ್ಸೆಮಕ್ಕಿ ಜಿ.ಎಮ್. ಆಗ್ರೋ ಇಂಡಸ್ಟಿçÃಸ್‌ನ ಮಾಲಕರಾದ ಶ್ರೀ ಕಿಶೋರ್ ಕುಮಾರ್ ಶೆಟ್ಟಿ ಕ್ಯಾಸನಮಕ್ಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಲ್ಕೆರೆ ಇಲ್ಲಿನ ಮುಖ್ಯ ಶಿಕ್ಷಕರಾದ ಶ್ರೀ ಸಂತೋಷ್ ಶೆಟ್ಟಿ, ಶ್ರೀ ಜಯರಾಮ ಶೆಟ್ಟಿ ಕೈಲ್ಕೆರೆ, ಬನ್ನಾಡಿ ಬ್ರಹ್ಮಬೈದರ್ಕಳ ಕಂಬಳ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಬನ್ನಾಡಿ, ಹುಣ್ಸೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ತಲ್ಮಕ್ಕಿಯ ಅನುವಂಶಿಕ ಮೊಕ್ತೇಸರರಾದ ಶ್ರೀ ವಿಶ್ವಾಸ್ ಭಂಡಾರ್‌ಕಾರ್, ಪಿ.ಡಬ್ಲ್ಯೂ.ಡಿ. ಕಂಟ್ರಾಕ್ಟರ್ ಶ್ರೀ ವಿಜಯಚಂದ್ರ ಶೆಟ್ಟಿ ಕೊತ್ತಾಡಿ, ಹುಣ್ಸೆಮಕ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಪೂಜಾರಿ, ಯಡಾಡಿ-ಮತ್ಯಾಡಿಯ ಶಿಕ್ಷಕರಾದ ಶ್ರೀ ಸುಧಾಕರ್ ಹಳ್ನಿರು, ಶ್ರೀ ಮಂಜುನಾಥ್ ಪೂಜಾರಿ ಹುಣ್ಸೆಮಕ್ಕಿ, ಹೊಂಬಾಡಿ-ಮAಡಾಡಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಗಣೇಶ್ ಶೆಟ್ಟಿ, ಯಕ್ಷಕೇದಿಗೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘ, ಗುಡ್ಡೆಯಂಗಡಿ ಇದರ ಅಧ್ಯಕ್ಷರಾದ ಶ್ರೀ ರಾಜಾರಾಮ್ ಶೆಟ್ಟಿ, ಸಂಕೇತ್ ಕೊಠಾರಿ ಗುಡ್ಡೆಯಂಗಡಿ, ಶ್ರೀ ಹರೀಶ್ ಆಚಾರ್ ಗುಡ್ಡೆಯಂಗಡಿ, ಶ್ರೀ ಪ್ರಭಾಕರ್ ಆಚಾರ್ ಗುಡ್ಡೆಯಂಗಡಿ, ಶ್ರೀ ರಂಜಿತ್ ಶೆಟ್ಟಿ ಮತ್ಯಾಡಿ, ಶ್ರೀ ಸುರೇಶ್ ಶೆಟ್ಟಿ ಮತ್ಯಾಡಿ, ಶ್ರೀ ರಾಘವೇಂದ್ರ ಕುಲಾಲ್ ನಾಲ್ತೂರು, ಶ್ರೀ ಶಿವರಾಮ್ ಅಡಿಗ ನಾಲ್ತೂರು ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಪೂಜಾ ಕುಂದರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

