Home » ನಡುವೆ ನಡೆದ ವಾಗ್ವಾದ :ಕೊಲೆ ಪ್ರಕರಣಕ್ಕೆ ತಿರುಗಿದ ಘಟನೆ
 

ನಡುವೆ ನಡೆದ ವಾಗ್ವಾದ :ಕೊಲೆ ಪ್ರಕರಣಕ್ಕೆ ತಿರುಗಿದ ಘಟನೆ

by Kundapur Xpress
Spread the love

ಬೈಂದೂರು: ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆಯಲ್ಲಿ ತಡರಾತ್ರಿ ನಡೆದಿದೆ.
ಕೊಲೆಗೀಡಾದವರು ಕೇರಳ ಮೂಲದ ಕಾರ್ಮಿಕ ಬಿನೋ ಫಿಲಿಪ್ (45). ಆರೋಪಿ ಉದಯ್ ಎಂದು ಪೊಲೀಸರು ಗುರುತಿಸಿದ್ದಾರೆ.
ಮಾಹಿತಿಯಂತೆ, ಸ್ಥಳೀಯ ತೋಟ ಮಾಲೀಕರಾದ ಥೋಮಸ್ ಅವರ ತೋಟದಲ್ಲಿ ಬಿನೋ ಮತ್ತು ಉದಯ್ ಕಳೆದ ಎರಡು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಮದ್ಯಪಾನದ ಅಭ್ಯಾಸದಿಂದಾಗಿ ಇಬ್ಬರಲ್ಲೂ ಆಗಾಗ್ಗೆ ವಾಗ್ವಾದ ಉಂಟಾಗುತ್ತಿದ್ದಿತ್ತೆಂದು ಮೂಲಗಳು ತಿಳಿಸಿವೆ. ರಾತ್ರಿ ಕೂಡಾ ಇಬ್ಬರ ನಡುವೆ ಘರ್ಷಣೆ ನಡೆದಿದ್ದು, ಕೋಪಗೊಂಡ ಉದಯ್ ತೋಟದಲ್ಲಿ ಬಳಸುತ್ತಿದ್ದ ಚೂರಿಯಿಂದ ಬಿನೋಗೆ ಇರಿದ ಪರಿಣಾಮ ಬಿನೋ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ನಂತರ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ನೇತೃತ್ವದಲ್ಲಿ ಬೈಂದೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ

 

Related Articles

error: Content is protected !!