Home » ಬೈಂದೂರು : ಹಸು ಕಳವು ಮಾಂಸ ಮಾಡಿ ಮಾರಾಟ
 

ಬೈಂದೂರು : ಹಸು ಕಳವು ಮಾಂಸ ಮಾಡಿ ಮಾರಾಟ

by Kundapur Xpress
Spread the love

ಬೈಂದೂರು : ನಾಗೂರು ಸಮೀಪ ರಸ್ತೆಯಲ್ಲಿ ಮಲಗಿದ್ದ ಗಂಡು ಹಸುವನ್ನು ಕಳವು ಮಾಡಿ, ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಓಮಿನಿ ಕಾರಿನಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಬೈಂದೂರು ಪೊಲೀಸರು ಪತ್ತೆಹಚ್ಚಿದ್ದು, ಹಸುವಿನೊಂದಿಗೆ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜುಲೈ 8ರಂದು ಬೆಳಿಗ್ಗೆ ಸುಮಾರು 5 ಗಂಟೆಗೆ ನಾಗೂರು ಸಮೀಪ ರಸ್ತೆಯಲ್ಲಿ ಮಲಗಿದ್ದ ಗಂಡು ಹಸುವನ್ನು ಆರೋಪಿಗಳು ಕಳವು ಮಾಡಿ, KA-05-MA-5284 ಸಂಖ್ಯೆಯ ಓಮಿನಿ ಕಾರಿನಲ್ಲಿ ತುಂಬಿಸಿಕೊಂಡು ಮರವಂತೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹೆದ್ದಾರಿ ಗಸ್ತು (HP) ವಾಹನದ ಸಿಬ್ಬಂದಿ ಕಾರನ್ನು ಹಿಂಬಾಲಿಸಿದರು. ಹಿಂಬಾಲನೆ ನಡೆಯುತ್ತಿದ್ದುದನ್ನು ಗಮನಿಸಿದ ಆರೋಪಿಗಳು ಮರವಂತೆ ಹೊಳೆಬಾಗಿಲು ಸಮೀಪ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.

ಮಾಹಿತಿ ಪಡೆದ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಹೇಶ್ ಪೂಜೇರ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹಸುವಿನ ಕಾಲು ಮತ್ತು ಕುತ್ತಿಗೆಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಕಾರಿನೊಳಗೆ ತುಂಬಿಸಿರುವುದು ಕಂಡುಬಂದಿದೆ. ಪೊಲೀಸರು ಸುಮಾರು ₹5,000 ಮೌಲ್ಯದ ಗಂಡು ಹಸುವನ್ನು, ಕೃತ್ಯಕ್ಕೆ ಬಳಸಿದ ಓಮಿನಿ ಕಾರು ಹಾಗೂ ಹಗ್ಗವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 94/2026ರಡಿ ಕರ್ನಾಟಕ ಗೋಹತ್ಯೆ ನಿಷೇಧ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ, 2025ರ ಕಲಂ 4, 5 ಮತ್ತು 12, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 11(1)(ಡಿ) ಹಾಗೂ ಬಿಎನ್‌ಎಸ್ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

 

Related Articles

error: Content is protected !!