ಕಾರ್ಕಳ : ಪಿರ್ಯಾದಿದಾರರಾದ ವಾಸುದೇವ ರವರಿಗೆ RTO ಪಿಡಿಎಫ್ ವಾಟ್ಸಾಪ್ ಸಂದೇಶ ಬಂದಿರುವುದನ್ನು ಓಪನ್ ಮಾಡಲು ನೋಡಿದಾಗ ಓಪನ್ ಆಗದೇ ಇದ್ದು, ನಂತರ ಹಲವಾರು ಬಾರಿ ಓಟಿಪಿ ಬಂದಿದ್ದು, ನಂತರ ಪಿರ್ಯಾದಿದಾರರ ಕಾರ್ಕಳ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂಪಾಯಿ 5, 63, 117/-ಹಣ ಕಡಿತಗೊಂಡಿದ್ದು, ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2026 ಕಲಂ: 66(D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.
ವಂಚನೆಗೊಳಗಾದ ವಾಸುದೇವ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2026, ಐಟಿ ಕಾಯ್ದೆ (IT Act) ಕಲಂ 66(D) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ ಅಪರಿಚಿತ ನಂಬರ್‌ಗಳಿಂದ ಬರುವ ವಾಟ್ಸಾಪ್ ಸಂದೇಶಗಳು, ಲಿಂಕ್‌ಗಳು ಅಥವಾ ಪಿಡಿಎಫ್ ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಬೇಡಿ.
ಇಂತಹ ಲಿಂಕ್‌ಗಳನ್ನು ಒತ್ತಿದ ತಕ್ಷಣ ಮೊಬೈಲ್‌ಗೆ ಬರುವ ಒಟಿಪಿ (OTP) ಸಂಖ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಸೈಬರ್ ವಂಚನೆಗೊಳಗಾದ ತಕ್ಷಣವೇ ಉಚಿತ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ದೂರು ದಾಖಲಿಸಿ.

