46
ಹೊಸದಿಲ್ಲಿ: ಇತ್ತೀಚೆಗೆ ಮಾಳವೀಯ ನಗರದ ರೆಸ್ಟೋರೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ದಿಲ್ತಾದ್ ಗಾರ್ಡನ್ ನಿವಾಸಿ ಕೇಶವ್ ನೇಗಿ (65) ಬಂಧಿತ ಆರೋಪಿ. ಈ ಅಗ್ನಿ ದುರಂತಕ್ಕೆ ಹೋಟೆಲ್‌ನ ಅಡುಗೆಯವರ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದ್ದರಿಂದ ಅಡುಗೆ ಕೆಲಸಗಾರನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 3 ರಂದು ಮಾಳವೀಯ ನಗರದ ಹೌಜ್‌ರಾಣಿ ಪ್ರದೇಶದ ಹೋಟೆಲ್ ವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಬೆಂಕಿಯ ಕೆನ್ನಾಲಿಗೆ ಇಡೀ ಹೋಟೆಲ್‌ಗೆ ವ್ಯಾಪಿಸಿ 21 ಮಂದಿ ಸಾವನ್ನಪ್ಪಿದ್ದರು. ಈ ಆಸ್ಪತ್ರೆಯಲ್ಲಿ ತಂಗಿದ್ದ ಆಫ್ರಿಕಾ ದೇಶದ ಪ್ರಜೆಗಳು ದುರಂತದ ವೇಳೆ ಗಾಯಗೊಂಡಿದ್ದರು. ಬಳಿಕ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

