Home » ಜಾಹೀರಾತು ನಂಬಿ ಹೂಡಿಕೆ : ಲಾಭಾಂಶ ನೀಡುವುದಾಗಿ ನಂಬಿಸಿ ಅಪರಿಚಿತರು ವಂಚನೆ
 

ಜಾಹೀರಾತು ನಂಬಿ ಹೂಡಿಕೆ : ಲಾಭಾಂಶ ನೀಡುವುದಾಗಿ ನಂಬಿಸಿ ಅಪರಿಚಿತರು ವಂಚನೆ

by Kundapur Xpress
Spread the love

ಉಡುಪಿ: ಫೇಸ್‌ಬುಕ್‌ನಲ್ಲಿ ಕಂಡ ವಿಡಿಯೋ ಜಾಹೀರಾತು ನಂಬಿ ಹೂಡಿಕೆ ಮಾಡಿದ ವ್ಯಕ್ತಿಗೆ ಭಾರೀ ಮೋಸವಾದ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಪಿರ್ಯಾದಿದಾರ ಅನಿಲ್‌ ಅವರು “ಇಂಟರ್‌ನ್ಯಾಶನಲ್ ರಿಪೋರ್ಟಿಂಗ್ ಎಐ ಟ್ರೇಡಿಂಗ್” ಎಂಬ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಅಪರಿಚಿತರು ವಂಚನೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತಿನಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಬಳಿಕ, ಆರೋಪಿಗಳು ಅನಿಲ್ ಅವರನ್ನು “manav verma” ಎಂಬ ವಾಟ್ಸ್ಆಪ್‌ ಗ್ರೂಪ್‌ಗೆ ಸೇರಿಸಿದ್ದರು. ನಂತರ ವಾಟ್ಸ್ಆಪ್‌ ಕರೆ ಮತ್ತು ಸಂದೇಶಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ದೊರೆಯುತ್ತದೆ ಎಂದು ಪ್ರಲೋಭನೆ ನೀಡಿದರು.

ಆಮೇಲೆ, ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಪಿರ್ಯಾದಿದಾರರು ತಮ್ಮ ಖಾತೆಯಿಂದ NEFT ಮತ್ತು RTGS ಮುಖಾಂತರ 02 ಡಿಸೆಂಬರ್ 2025 ರಿಂದ 09 ಫೆಬ್ರವರಿ 2026 ರವರೆಗೆ ಒಟ್ಟು ₹57,70,945.60 ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಈವರೆಗೆ ಯಾವುದೇ ಲಾಭಾಂಶ ಅಥವಾ ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಉಡುಪಿ ಸೆನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!