Home » ಕಾರೊಂದು ಪಲ್ಟಿ : ಪ್ರಾಣಾಪಾಯದಿಂದ ಪಾರು
 

ಕಾರೊಂದು ಪಲ್ಟಿ : ಪ್ರಾಣಾಪಾಯದಿಂದ ಪಾರು

by Kundapur Xpress
Spread the love

ಹೆಬ್ರಿ : ಧರ್ಮಸ್ಥಳದಿಂದ ಕಾರ್ಕಳ ಮಾರ್ಗವಾಗಿ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಮಾರುತಿ ಆಲ್ಟೊ ಕಾರೊಂದು ಮುನಿಯಾಲಿನಲ್ಲಿ ಪಲ್ಟಿಯಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ಈ ಅಪಘಾತದಲ್ಲಿ ಕಾರು ಚಾಲಕ ಸೇರಿ ಇಬ್ಬರು ಪುರುಷರು, ಮೂವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಸ್ವಲ್ಪ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುನಿಯಾಲಿನ ಮಂಜುನಾಥ ಪೈ ಮನೆಯ ಸಮೀಪದ ತಿರುವಿನಲ್ಲಿ ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ.

ಕಾರನ್ನು ಸ್ಥಳೀಯರ ಸಹಾಯದಿಂದ ಕ್ರೇನ್ ನ ಮೂಲಕ ಮೇಲೆಕ್ಕೆತ್ತಲಾಯಿತು.

 

Related Articles

error: Content is protected !!