Home » ಶಿರ್ವಾ ಪೊಲೀಸರು ದಾಳಿ : ಗಾಂಜಾ ಮಾರಾಟ ಇಬ್ಬರು ಬಂಧನ
 

ಶಿರ್ವಾ ಪೊಲೀಸರು ದಾಳಿ : ಗಾಂಜಾ ಮಾರಾಟ ಇಬ್ಬರು ಬಂಧನ

by Kundapur Xpress
Spread the love

ಕಾಪು : ತಾಲೂಕು ಬೆಳಪು ಗ್ರಾಮದಲ್ಲಿ ಗಾಂಜಾ ಮಾರಾಟಕ್ಕೆ ಬಂದ ಇಬ್ಬರನ್ನು ಶಿರ್ವಾ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಶಿರ್ವಾ ಠಾಣಾ ಉಪನಿರೀಕ್ಷಕ ಮಂಜುನಾಥ ಮರಬದ ಅವರ ನೇತೃತ್ವದ ತಂಡವು ಬೆಳಪು ಇಂಡಸ್ಟ್ರಿಯಲ್ ಏರಿಯಾ ಕ್ರಾಸ್ ಬಳಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡಲು ಬಂದಿದ್ದ ಆರೋಪಿತರಾದ ಅಭಿಷೇಕ್ ಪಾಲನ್ (30) ಹಾಗೂ ಆರ್. ಶಾಶ್ವತ್ (24)ರನ್ನು ವಶಕ್ಕೆ ಪಡೆದಿದೆ.ಬಂಧಿತರಿಂದ ಸುಮಾರು 115.44 ಗ್ರಾಂ ಗಾಂಜಾ, ಡಿಜಿಟಲ್ ತೂಕದ ಯಂತ್ರ, ಪ್ಲಾಸ್ಟಿಕ್ ಡಬ್ಬಾ, ಕೈಚೀಲ ಹಾಗೂ ಯಮಹಾ FZ ಬೈಕ್‌ ಸೇರಿದಂತೆ ಒಟ್ಟು ಸುಮಾರು 75,000 ಮೌಲ್ಯದ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಸಂಬಂಧ ಶಿರ್ವಾ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ

 

Related Articles

error: Content is protected !!