Home » ಚಿತ್ತೂರು ಫ್ಯೂಯಲ್ಸ್ ಮಾಲಕ ಇಡೂರು ಕರುಣಾಕರ ಶೆಟ್ಟಿ ನಿಧನ
 

ಚಿತ್ತೂರು ಫ್ಯೂಯಲ್ಸ್ ಮಾಲಕ ಇಡೂರು ಕರುಣಾಕರ ಶೆಟ್ಟಿ ನಿಧನ

by Kundapur Xpress
Spread the love

ಚಿತ್ತೂರು : ಕುಂದಾಪುರ ತಾಲೂಕು ಚಿತ್ತೂರಿನಲ್ಲಿರುವ ಚಿತ್ತೂರು ಫ್ಯೂಯಲ್ಸ್ ಮಾಲಕ ಇಡೂರು ಕರುಣಾಕರ ಶೆಟ್ಟಿ (49) ಹೃದಯಾಘಾತದಿಂದ ಇಂದು ಮಧ್ಯಾಹ್ನ ನಿಧನ ಹೊಂದಿದರು.ಅವರ ಖುಷಿ ಬಾರ್ & ರೆಸ್ಟೋರೆಂಟ್‌ನಲ್ಲಿ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಹೋಟೆಲ್ ಉದ್ಯಮಿಯಾಗಿರುವ ಅವರು ಬಳ್ಳಾರಿಯ ಸ್ಟೇಶನ್ ರಸ್ತೆಯಲ್ಲಿ ರೇಣುಕಾ ವೆಜ್ ಹಾಗೂ ಬಳ್ಳಾರಿಯ ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟ್ಯಾಂಡ್ ಎದುರು ಹೋಟೆಲ್ ದ್ವಾರಕ ರೆಸಿಡೆನ್ಸಿ ಲಾಡ್ಜಿಂಗ್ & ರೆಸ್ಟೋರೆಂಟನ್ನು ನಡೆಸಿಕೊಂಡಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಊರಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿ ಚಿತ್ತೂರಿನಲ್ಲಿ ಪೆಟ್ರೋಲ್ ಬಂಕ್ ಹಾಗೂ ಸಕಲ ಕನ್ವೆಷನ್ ಸಭಾಂಗಣ, ಹಾಲ್ಕಲ್‌ನಲ್ಲಿ ಖುಷಿ ಬಾರ್ & ರೆಸ್ಟೋರೆಂಟ್ ಸ್ಥಾಪಿಸಿದ್ದರು.ಇಡೂರು ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಚಟುವಟಿಕೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನೀಡುತ್ತಾ ಬಂದಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು.
ಮೃತರು ತಾಯಿ, ಮಡದಿ, ಪುತ್ರಿ, ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

 

Related Articles

error: Content is protected !!