Home » ಉಚಿತ ಅನ್ನಭಾಗ್ಯ ಅಕ್ಕಿ ಸಾಗಾಟ ನಡೆಸುತ್ತಿರುವಾಗ ಪೊಲೀಸರ ವಶಕ್ಕೆ
 

ಉಚಿತ ಅನ್ನಭಾಗ್ಯ ಅಕ್ಕಿ ಸಾಗಾಟ ನಡೆಸುತ್ತಿರುವಾಗ ಪೊಲೀಸರ ವಶಕ್ಕೆ

by Kundapur Xpress
Spread the love

 

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೊಬ್ಬರು ಆಟೋ ರಿಕ್ಷಾದಲ್ಲಿ ಉಚಿತ ಅನ್ನಭಾಗ್ಯ ಅಕ್ಕಿಯನ್ನು ಸಾಗಾಟ ನಡೆಸುತ್ತಿರುವಾಗ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.

ಆಟೋ ಚಾಲಕ ಬಾಲಕೃಷ್ಣ ಖಾರ್ವಿಯನ್ನು ಪೊಲೀಸರು ಅಕ್ಕಿ ಸಹಿತ ವಶಪಡಿಸಿಕೊಂಡಿದ್ದಾರೆ.

ಪಿರ್ಯಾದಿದಾರರಾದ ಸುರೇಶ ಎಚ್.ಎಸ್ ಆಹಾರ ನಿರೀಕ್ಷಕರು, ಕುಂದಾಪುರ ಇವರಿಗೆ ದಿನಾಂಕ: 14/02/2026 ರಂದು ಸಂಜೆ ಸುಮಾರು 06.30 ಗಂಟೆ ಸಮಯಕ್ಕೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ರಿಂಗ್‌ ರಸ್ತೆ ಸಮೀಪ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಪಿರ್ಯಾದಿದಾರರು ಕುಂದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ನಂಜಾನಾಯ್ಕ್‌ ಎನ್‌ ಹಾಗೂ ಸಿಬ್ಬಂದಿಯವರೊಂದಿಗೆ ಸಂಜೆ ಸುಮಾರು 6.40 ಗಂಟೆ ಸಮಯಕ್ಕೆ ಸದ್ರಿ ಸ್ಥಳಕ್ಕೆ ಹೋಗಿ ಕಾಯುತ್ತಿರುವಾಗ KA20AC2865 ಬಜಾಜ್‌ ಮ್ಯಾಕ್ಸ್‌ ಕಂಪೆನಿಯ ಆಟೋ ರಿಕ್ಷಾವು ಖಾರ್ವಿಕೇರಿ ರಿಂಗ್‌ ರಸ್ತೆ ಕಡೆಯಿಂದ ಬರುತ್ತಿರುವುದನ್ನು ಕಂಡು ಸದ್ರಿ ರಿಕ್ಷಾವನ್ನು ನಿಲ್ಲಿಸಿ ಪರಿಶೀಲಿಸಲಾಗಿ ಆಟೋ ರಿಕ್ಷಾದಲ್ಲಿ ಅಕ್ಕಿ ತುಂಬಿದ 8 ಪಾಲೀಥಿನ್‌ ಚೀಲದಲ್ಲಿ ಉಚಿತ ಅನ್ನಭಾಗ್ಯ ಅಕ್ಕಿಯನ್ನು ತುಂಬಿಸಿ ಸಾಗಿಸುತ್ತಿರುವ ಚಾಲಕ ಕೃಷ್ಣ ಖಾರ್ವಿ ಯಾವುದೇ ಪರವಾನಿಗೆ ಇಲ್ಲದೇ 1) 50 ಕೆ.ಜಿಯ 1 ಚೀಲ , 2) 40 ಕೆ.ಜಿ ಯ 4 ಚೀಲ 3)30 ಕೆ.ಜಿಯ 3 ಚೀಲ ಒಟ್ಟು ತೂಕ 300 ಕೆ.ಜಿ ತೂಕದ ಅಂದಾಜು ಮೌಲ್ಯ ರೂ 7200/- ರೂಪಾಯಿ ಮೌಲ್ಯದ ಅಕ್ಕಿಯನ್ನು ಸ್ವಾಧಿನಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ: 12/2026 ಕಲಂ:3,6,7 Essential Commodities Act 1955 ರಂತೆ ಪ್ರಕರಣ ದಾಖಲಾಗಿರುತ್ತದೆ.

 

Related Articles

error: Content is protected !!