Home » ಉದ್ಯಮಿ ಗೋವಿಂದ ಬಾಬು ಪೂಜಾರಿವರಿಂದ 20ನೇ ಮನೆ ಗೃಹಪ್ರವೇಶ
 

ಉದ್ಯಮಿ ಗೋವಿಂದ ಬಾಬು ಪೂಜಾರಿವರಿಂದ 20ನೇ ಮನೆ ಗೃಹಪ್ರವೇಶ

by Kundapur Xpress
Spread the love

ಕುಂದಾಪುರ :ತಾಲ್ಲೂಕಿನ ಕಾವ್ರಾಡಿ ಗ್ರಾಮದ ಸಾರ್ಕಲ್ಲುನಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿವರಿಂದ 20ನೇ ಮನೆ ಗೃಹಪ್ರವೇಶವು ನಡೆಯಿತು.

ಶ್ರೀಮತಿ ಗೌರಿದೇವಾಡಿಗರ ನೂತನ ಗೃಹಪ್ರವೇಶವು, ದಿನಾಂಕ 21.4.2026 ಮಂಗಳವಾರ ಶ್ರೀ ಜಾತವೇದ ಸುಕ್ಷೇಮಾಲಯ ದೂರ್ವಾಸ ಕ್ಷೇತ್ರ ಶಿವಮೊಗ್ಗದ ಶ್ರೀ ಶ್ರೀ ಶ್ರೀ ಪಲ್ಲಕ್ಕಿ ನಾರಾಯಣ ಸ್ವಾಮೀಜಿ ಇವರ ಅಮೃತಹಸ್ತ ದಿಂದ ದೀಪ ಬೆಳಗುವ ಮುಖಾಂತರ ಮನೆ ಗೃಹಪ್ರವೇಶ ಮಾಡಲಾಯಿತು

ಮುಖ್ಯ ಅತಿಥಿಯಾಗಿದ್ದ ಉದ್ಯಮಿಗಳಾದ ಕಿಶನ್ ಹೆಗ್ಡೆ ಮಾತನಾಡುತ್ತಾ ಗೋವಿಂದ ಪೂಜಾರಿಯಂತಹ ಇಂತಹ ನಿಸ್ವಾರ್ಥ ಹೃದಯ ಉಳ್ಳವರು ಸಮಾಜದಲ್ಲಿ ಬಹಳಷ್ಟು ಕಡಿಮೆ ಇರುತ್ತಾರೆ. ಹಣವಂತರು ಶ್ರೀಮಂತರಲ್ಲ ಗುಣವಂತರು ಮಾತ್ರ ಶ್ರೀಮಂತರು ,ಅಂತವರಿಂದ ಮಾತ್ರ ಸಮಾಜ ಉದ್ದರವಾಗಲು ಸಾಧ್ಯ ಎಂದು ನುಡಿದರು

ರಘು ರಾಮ್ ದೇವಾಡಿಗ ಅಧ್ಯಕ್ಷರು ದೇವಾಡಿಗ ಸಂಘ ಬೈಂದೂರು ಹಾಗೂ ಧರ್ಮದರ್ಶಿ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ದೇವಾಡಿಗ ಸಮಾಜದ ಗೌರಿ ದೇವಾಡಿಗರಿಗೆ ಇಂದು ಮನೆ ನೀಡಿರುವುದು ದೇವಾಡಿಗ ಸಮಾಜದ ಋಣ ನಿಮ್ಮ ಮೇಲಿದೆ ಅಂತ ಹೇಳಿದರುಪ್ರಗತಿಪರ ಕೃಷಿಕ ಮುಂಬಾರು ದಿನಕರ ಶೆಟ್ಟಿ ಗೋವಿಂದ ಪೂಜಾರಿಯಂತಹ ಪುಣ್ಯಾತ್ಮರು ಭೂಮಿಯ ಮೇಲಿರುವಾಗ ಬಡವರ ಸಂಖ್ಯೆ ಕ್ಷೀಣವಾಗುತ್ತದೆ ಎಂದು ನುಡಿದರು

ಟ್ರಸ್ಟಿ,ಉದ್ಯಮಿ ಗೋವಿಂದ ಬಾಬು ಪೂಜಾರಿ ಮಾತನಾಡುತ್ತಾ ಸಮಾಜದ ಕಟ್ಟೆ ಕಡೆ ವ್ಯಕ್ತಿಗೂ ಕೂಡ ನಮ್ಮ ವರಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವೆ ಸಿಗಬೇಕೆನ್ನುವುದು ನಮ್ಮ ಆಶಯ, ಆ ಕಾರಣದಿಂದಲೇ ಇವತ್ತಿಗೆ 20ನೇ ಮನೆಯನ್ನು ಗೃಹಪ್ರವೇಶ ಮಾಡ್ತಿದ್ದೇವೆ, ಈ ಸೇವೆಯು ಹೀಗೆ ಮುಂದುವರಿಯುತ್ತದೆ 50 ಮನೆ ತನಕ ಈ ಯೋಜನೆ ಮುಂದುವರೆಯುತ್ತದೆ ಎಂದು ತಿಳಿಸಿದರು.

ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಹಿಂದು ಜಾಗರಣ ವೇದಿಕೆಯ ಜಗದೀಶ್ ಕಾರಂತ್ ಮಾತನಾಡುತ್ತಾ ಗೋವಿಂದ ಬಾಬು ಪೂಜಾರಿಯವರು ಇವಾಗಲೇ ಬಹಳಷ್ಟು ಸಾಮಾಜಿಕ ಸೇವೆಗಳನ್ನು ನೀಡಿರುತ್ತಾರೆ ಅದರಲ್ಲಿ ವಿಶೇಷವಾಗಿ ಸಮಾಜದ ಕಡು ಬಡವರನ್ನು ಹುಡುಕಿ ಮನೆಯನ್ನು ದಾನದ ರೂಪದಲ್ಲಿ ಹಸ್ತಾಂತರ ಮಾಡುವುದು ಬಹಳಷ್ಟು ದೊಡ್ಡ ಸಾಧನೆ ಎಂದು ನುಡಿದರು

ಈ ಸಂಧರ್ಭದಲ್ಲಿ ಧರ್ಮದರ್ಶಿ ಪ್ರಭಾಕರ್ ಶೆಟ್ಟಿ, ಮನೋಹರ ಶೆಟ್ಟಿ, ನಿವೃತ್ತಿ ಶಿಕ್ಷಕ ಬಾಲಚಂದ್ರ ಶೆಟ್ಟಿ, ಟ್ರಸ್ಟಿ ನಾಗರಾಜ್ ಪಿ. ಯಡ್ತರೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ಬ್ಯಾಂಕ್ ನಿವ್ರತ್ತ ಅಧಿಕಾರಿ ಸೂರ್ಯ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.ಸುಬ್ರಮಣ್ಯ ಜಿ. ಉಪ್ಪಂದ ಇವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಶುಶಾಂತ ಆಚಾರ್ಯ ಬೈಂದೂರು ವಂದಿಸಿದರು

 

Related Articles

error: Content is protected !!