Home » ಕೋಟ : ನೇಣು ಬಿಗಿದ್ದು ಆತ್ಮಹತ್ಯೆ
 

ಕೋಟ : ನೇಣು ಬಿಗಿದ್ದು ಆತ್ಮಹತ್ಯೆ

by Kundapur Xpress
Spread the love

ಕೋಟ : ಒಂಟಿತನ ಮತ್ತು ಮಾನಸಿಕ ಬೇಸರದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ಕೋಟದಲ್ಲಿ ನಡೆದಿದೆ.

ಹಂಗಾರಕಟ್ಟೆ ನಿವಾಸಿ ಗಣೇಶ್ ಪ್ರಭು ಅವರ ಅಕ್ಕ ಅಶ್ವಿನಿ ಕಾಮತ್ (59) ಅವರು ಕೋಟದ ತಮ್ಮ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಅವರ ಪತಿ ಅನಾರೋಗ್ಯದಿಂದ ನಿಧನರಾಗಿದ್ದು, ಅದಕ್ಕೂ ಮೊದಲು ಅವರ ಏಕೈಕ ಮಗಳು ಕೂಡ ಮೃತಪಟ್ಟಿದ್ದರಿಂದ ಅವರು ಸದಾ ಮನನೊಂದು ಬದುಕುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆಗೆ ಮುನ್ನ, ಏಪ್ರಿಲ್ 20ರಂದು ರಾತ್ರಿ 9:30ರ ಸುಮಾರಿಗೆ ಗಣೇಶ್ ಪ್ರಭು ಅವರು ತಮ್ಮ ಅಕ್ಕನೊಂದಿಗೆ ದೂರವಾಣಿ ಮೂಲಕ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದರು. ಆದರೆ ಏಪ್ರಿಲ್ 21ರಂದು ಬೆಳಿಗ್ಗೆ ಕರೆ ಮಾಡಿದಾಗ ಅವರು ಪ್ರತಿಕ್ರಿಯಿಸದ ಹಿನ್ನೆಲೆ ಅನುಮಾನಗೊಂಡ ಅವರು ಮನೆಗೆ ತೆರಳಿ ನೋಡಿದಾಗ, ಅಶ್ವಿನಿ ಕಾಮತ್ ಅವರು ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಜೀವನದ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದ್ದು, ಸಾವಿನಲ್ಲಿ ಯಾವುದೇ ಅನುಮಾನವಿಲ್ಲವೆಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Related Articles

error: Content is protected !!