Home » ಬೈಂದೂರು : ಇಸ್ವಿಟ್ ಜುಗಾರಿ ಅಡ್ಡೆ ಮೇಲೆ ಪೋಲೀಸ್‌ ದಾಳಿ
 

ಬೈಂದೂರು : ಇಸ್ವಿಟ್ ಜುಗಾರಿ ಅಡ್ಡೆ ಮೇಲೆ ಪೋಲೀಸ್‌ ದಾಳಿ

by Kundapur Xpress
Spread the love

ಬೈಂದೂರು :ತಾಲೂಕಿನ ಶಿರೂರು ಗ್ರಾಮದ ಮೈದಿನಪುರದಲ್ಲಿ ಇಸ್ವಿಟ್ ಜುಗಾರಿ ಆಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುನೀಲ್ ಕುಮಾರ್ ಬಿ.ವೈ. ನೇತೃತ್ವದ ತಂಡ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದೆ.

ಬಂಧಿತರನ್ನು ಶ್ರೀಧರ ಮುಲ್ಲಿಗದ್ದೆ (44), ಸಂತೋಷ ಕುಮಾರ್ ಮೈದಿನಪುರ (35) , ಶಿರೂರು, ಸುರೇಶ್ ಮಗಲಗದ್ದೆ (43) , ನೀರ್ಗದ್ದೆ, ಶಿರೂರು ಹಾಗೂ ದೇವೇಂದ್ರ (38) ಮುಂಡೊಳ್ಳಿ ಹೊಸಮನೆ, ಭಟ್ಕಳ ಎಂದು ಗುರುತಿಸಲಾಗಿದೆ.

ದಾಳಿ ವೇಳೆ ಕೃಷ್ಣ ಗಾಣಿಗ ಹಾಗೂ ಗಣೇಶ್ ಪೂಜಾರಿ, ಶಿರೂರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳಿಂದ ಜುಗಾರಿ ಆಟಕ್ಕೆ ಬಳಸಲಾಗಿದ್ದ 2 ಟರ್ಪಾಲು, ₹1,420 ನಗದು ಹಾಗೂ ಇಸ್ವಿಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 92/2026ರಡಿ ಕರ್ನಾಟಕ ಪೊಲೀಸ್ ಕಾಯ್ದೆ (KP Act) ಕಲಂ 87 ಅನ್ವಯ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ

 

Related Articles

error: Content is protected !!