Home ಕರಾವಳಿ ಸುದ್ದಿಕೋಟ : ಕಾರು ಬೈಕ್‌ಗೆ ಡಿಕ್ಕಿ : ಬೈಕ್‌ ಸವಾರ ಗಂಭೀರ….ಸಹಸವಾರ ಸಾವು….

ಕೋಟ : ಕಾರು ಬೈಕ್‌ಗೆ ಡಿಕ್ಕಿ : ಬೈಕ್‌ ಸವಾರ ಗಂಭೀರ….ಸಹಸವಾರ ಸಾವು….

Kota: Car Collides with Bike; Pillion Rider Dies, Rider Critically Injured

by Kundapur Xpress

ಕೋಟ: ಅತೀವೇಗ ಮತ್ತು ಅಜಾಗರೂಕತೆಯಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರ ಮೃತಪಟ್ಟು, ಸವಾರ ಗಂಭೀರ ಗಾಯಗೊಂಡ ಘಟನೆ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಜನ್ನಾಡಿ ಮೂರುಕೈ ಬಳಿ ನಡೆದಿದೆ.

ದೂರುದಾರ ಸುರೇಶ್ ದೇವಾಡಿಗ (46) ಅವರು ಸೆ.27 ರಂದು ಮಧ್ಯಾಹ್ನ ಮರ್ಜಿಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾದ ಬಗ್ಗೆ ದೂರು ಬಂದ ಹಿನ್ನೆಲೆ ಸೌಡದಿಂದ ಮರ್ಜಿಗೆ ತೆರಳುತ್ತಿದ್ದಾಗ, ಮಧ್ಯಾಹ್ನ 3 ಗಂಟೆಗೆ ಈ ಅಪಘಾತವನ್ನು ಕಂಡಿದ್ದಾರೆ.

ಕೋಟೇಶ್ವರ-ಹಾಲಾಡಿ ಮುಖ್ಯ ರಾಜ್ಯ ರಸ್ತೆಯಲ್ಲಿ ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ KA-19-MG-9207 ಕಾರಿನ ಚಾಲಕ ರಾಘವೇಂದ್ರ ಮಯ್ಯ ಅವರು ಅತೀವೇಗದಿಂದ ಚಲಾಯಿಸಿಕೊಂಡು ಬಂದು, ಕೇಶವ ಕಾಮತ್ ಮನೆ ಎದುರು ರಸ್ತೆಯ ತೀರ ಬಲಬದಿಗೆ ನುಗ್ಗಿ, ಹಾಲಾಡಿ ಕಡೆಯಿಂದ ಕೋಟೇಶ್ವರ ಕಡೆಗೆ ಬರುತ್ತಿದ್ದ KA-20-ER-3396 ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಬೈಕ್ ಸುಮಾರು 50 ಮೀಟರ್ ದೂರ ಎಳೆದುಕೊಂಡು ಹೋಗಿದೆ. ಬೈಕ್ ಹಿಂಬದಿ ಸವಾರ ರಂಗ ಅವರ ತಲೆಗೆ ತೀವ್ರ ಗಾಯವಾಗಿ ಮಾತನಾಡದ ಸ್ಥಿತಿಯಲ್ಲಿದ್ದರೆ, ಬೈಕ್ ಸವಾರ ರಾಮ ಮಡಿವಾಳ ಅವರ ಎರಡೂ ಕಾಲಿಗೆ ರಕ್ತಗಾಯವಾಗಿದೆ.

ಗಾಯಾಳುಗಳನ್ನು ತಕ್ಷಣ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಹಸವಾರ ರಂಗ ಅವರು ಚಿಕಿತ್ಸೆ ಫಲಿಸದೆ ಸಂಜೆ 4:30ಕ್ಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ರಾಮ ಮಡಿವಾಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 146/2026, ಕಲಂ 281, 125(b), 106 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Leave a Comment

This site uses Akismet to reduce spam. Learn how your comment data is processed.