Home ಕರಾವಳಿ ಸುದ್ದಿಮಂಗಳೂರು : ಡಿಜಿಟಲ್ ಅರೆಸ್ಟ್ : 75 ವರ್ಷದ ಮಹಿಳೆಯಿಂದ 2 ಕೋಟಿ ರೂ. ವಂಚನೆ

ಮಂಗಳೂರು : ಡಿಜಿಟಲ್ ಅರೆಸ್ಟ್ : 75 ವರ್ಷದ ಮಹಿಳೆಯಿಂದ 2 ಕೋಟಿ ರೂ. ವಂಚನೆ

Mangaluru: Digital Arrest — 75-Year-Old Woman Scammed of ₹2 Crore

by Kundapur Xpress

ಮಂಗಳೂರು : ಪೊಲೀಸ್ ಮತ್ತು CBI ಅಧಿಕಾರಿಗಳ ಹೆಸರಿನಲ್ಲಿ ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡುವ ಹೊಸ ಜಾಲಕ್ಕೆ ಉಡುಪಿಯ 75 ವರ್ಷದ ಮಹಿಳೆಯೊಬ್ಬರು 2 ಕೋಟಿ ರೂ. ಕಳೆದುಕೊಂಡಿದ್ದಾರೆ.

ಸೆಪ್ಟೆಂಬರ್ 25ರಂದು ವೃದ್ಧೆಯ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತನೊಬ್ಬ ತಾನು ಬಾಂಬೆ ಕೊಲಬಾ ಪೊಲೀಸ್ ಠಾಣೆಯ ಅಧಿಕಾರಿ ಸಂದೀಪ್ ರಾವ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಂತರಾಷ್ಟ್ರೀಯ ಮನಿ ಲಾಂಡರಿಂಗ್ ಆರೋಪಿ ನರೇಶ್ ಗೋಯಲ್ ಜೊತೆ ನೀವು ಮನಿ ಲಾಂಡರಿಂಗ್, ಡ್ರಗ್ ಡೀಲಿಂಗ್ ಮತ್ತು ಚೈಲ್ಡ್ ಟ್ರಾಫಿಕಿಂಗ್‌ನಲ್ಲಿ ಭಾಗಿಯಾಗಿದ್ದೀರಿ, ನಿಮ್ಮ ಮೇಲೆ ಕೊಲಬಾ ಠಾಣೆಯಲ್ಲಿ ಕೇಸ್ ಇದೆ ಎಂದು ಹೇಳಿ ಬೆದರಿಸಿದ್ದಾನೆ.

ನಂತರ 9863489157 ನಂಬರ್‌ನಿಂದ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ತಾನು CBI ಅಧಿಕಾರಿ ಸಮಾಧಾನ್ ಪವಾರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಸುಪ್ರೀಂ ಕೋರ್ಟ್‌ನ ಜಡ್ಜ್ ಚಂದ್ರಚೂಡ್ ನಿಮಗೆ ಸಹಾಯ ಮಾಡುತ್ತಾರೆ, ನೀವು National Secrecy Act ಪಾಲಿಸಬೇಕು, 2 ದಿನದಲ್ಲಿ ಆಸ್ತಿ ಪರಿಶೀಲಿಸಿ ಕ್ಲಿಯರೆನ್ಸ್ ಕೊಡುತ್ತೇವೆ ಎಂದು ನಂಬಿಸಿದ್ದಾನೆ. ಈ ವಿಷಯ ಯಾರಿಗೂ ಹೇಳಬಾರದು, ನೀವು ಸರ್ವೆಲೆನ್ಸ್‌ನಲ್ಲಿದ್ದೀರಿ ಎಂದು ಬೆದರಿಕೆಯನ್ನೂ ಹಾಕಿದ್ದಾನೆ.

ಇದನ್ನು ನಂಬಿದ ವೃದ್ಧೆ ತಮ್ಮ ಬ್ಯಾಂಕ್ ಖಾತೆ ಮತ್ತು ಆಸ್ತಿ ವಿವರಗಳನ್ನು ನೀಡಿದ್ದಾರೆ. ಆರೋಪಿಗಳು ಹೇಳಿದಂತೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ.

ಮೊದಲಿಗೆ 60 ಲಕ್ಷ ರೂ. ಹಾಗೂ ಅಕ್ಟೋಬರ್ 3ರಂದು 1 ಕೋಟಿ 40 ಲಕ್ಷ ರೂ. ಹೀಗೆ ಒಟ್ಟು 2 ಕೋಟಿ ರೂ.ಗಳನ್ನು ಆರೋಪಿಗಳು ತಿಳಿಸಿದ Bank of India ಖಾತೆ ಸಂಖ್ಯೆ 873220110000125 (IFSC: BKID0008732) ಗೆ RTGS ಮೂಲಕ ವರ್ಗಾಯಿಸಿದ್ದಾರೆ.

ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 5ರವರೆಗೆ ನಡೆದ ಈ ವಂಚನೆ ಬಗ್ಗೆ ತಿಳಿದ ಬಳಿಕ ವೃದ್ಧೆ ದೂರು ನೀಡಿದ್ದಾರೆ.

ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ: ಪೊಲೀಸ್, CBI, ED, ಸುಪ್ರೀಂ ಕೋರ್ಟ್ ಹೆಸರಲ್ಲಿ ವಿಡಿಯೋ ಕಾಲ್ ಮಾಡಿ ಡಿಜಿಟಲ್ ಅರೆಸ್ಟ್ ಮಾಡುತ್ತೇವೆ ಎಂದು ಯಾರೂ ಕರೆ ಮಾಡುವುದಿಲ್ಲ. ಇಂತಹ ಕರೆ ಬಂದರೆ ತಕ್ಷಣ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ.

Related Articles

Leave a Comment

This site uses Akismet to reduce spam. Learn how your comment data is processed.