Home ಕರಾವಳಿ ಸುದ್ದಿಅಮಾಸೆಬೈಲು : ಅಕ್ರಮ ವಿದ್ಯುತ್ ಸಂಪರ್ಕದ ತಂತಿ ಬೇಲಿಗೆ ಸಿಲುಕಿ ಯುವಕ ಸಾವು

ಅಮಾಸೆಬೈಲು : ಅಕ್ರಮ ವಿದ್ಯುತ್ ಸಂಪರ್ಕದ ತಂತಿ ಬೇಲಿಗೆ ಸಿಲುಕಿ ಯುವಕ ಸಾವು

Amasebailu: Young Man Dies After Getting Caught in Illegally Electrified Wire Fence

by Kundapur Xpress

ಅಮಾಸೆಬೈಲು: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ತೋಟದ ಸುತ್ತ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದ ತಂತಿ ಬೇಲಿಗೆ ಸಿಲುಕಿ 26 ವರ್ಷದ ಯುವಕನೊಬ್ಬ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವ ಘಟನೆ ಅಮಾಸೆಬೈಲು ಹೊಸಂಗಡಿ ಗ್ರಾಮದ ಮಾತಿನಮಠದಲ್ಲಿ ನಡೆದಿದೆ.

ತಾರ್ಕಿಮಕ್ಕಿ ನಿವಾಸಿ ಕವೀನಾ (26) ಅವರು ಅಕ್ಟೋಬರ್ 2ರಂದು ಹೊಸಂಗಡಿಯ ಕೆಪಿಸಿ ಚೆಕ್‌ಪೋಸ್ಟ್ ಬಳಿಯಿಂದ ಕಾಣೆಯಾಗಿದ್ದರು. ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಅಕ್ಟೋಬರ್ 5ರಂದು ಕವೀನಾರ ಸಹೋದರ ಪ್ರವೀಣ ನಾಯ್ಕ ಅವರು ಹುಡುಕಾಟ ನಡೆಸುತ್ತಿದ್ದ ವೇಳೆ ಮಾತಿನಮಠದಲ್ಲಿರುವ ಶೇಖರ ನಾಯ್ಕ ಅವರ ಮನೆಯ ತೋಟದ ಬಳಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಮಾಹಿತಿ ಲಭಿಸಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತದೇಹ ಕವೀನಾರದ್ದು ಎಂದು ಗುರುತಿಸಲಾಗಿದೆ.

ಆರಂಭದಲ್ಲಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ UDR ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು. ತನಿಖೆಯ ವೇಳೆ ತೋಟದ ಸುತ್ತಲಿನ ತಂತಿ ಬೇಲಿಗೆ ಮನೆಯ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ನೀಡಲಾಗಿತ್ತು. ಇದೇ ತಂತಿ ಬೇಲಿಗೆ ತಾಗಿ ಕವೀನಾ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹ ಪತ್ತೆಯಾದ ಬಳಿಕ ತಂತಿ ಬೇಲಿಯ ಎರಡು ತಂತಿಗಳನ್ನು ತುಂಡು ಮಾಡಿ ಪಕ್ಕದ ಕಂಬಗಳಿಗೆ ಸುತ್ತಿ ಇಡುವ ಮೂಲಕ ಸಾವಿನ ಕಾರಣವನ್ನು ಮರೆಮಾಚಲು ಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಸಂಬಂಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Leave a Comment

This site uses Akismet to reduce spam. Learn how your comment data is processed.