ಮಣಿಪಾಲ: ಜೆ.ಇ.ಇ ಮೈನ್ಸ್ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ತನ್ನ ಮೊಬೈಲ್ನಲ್ಲಿ ಕಂಪ್ಯೂಟರ್ ನಲ್ಲಿದ್ದ ಪ್ರಶ್ನೆಪತ್ರಿಕೆಯ ಫೋಟೋ ತೆಗೆದು ಹಂಚಲು ಪ್ರಯತ್ನಿಸಿದ ಘಟನೆ TMA Pai ಪೊಲೀಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ.
ಪರೀಕ್ಷೆಗೆ ಒಳಗೆ ಬರುವ ವಿಧ್ಯಾರ್ಥಿಯವರಿಗೆ ವಿಳಾಸದ ಮಾಹಿತಿ ಬಗ್ಗೆ ಮೂಲ ಆಧಾರದ ಕಾರ್ಡ ಅಥವಾ ಪಾನ್ ಕಾರ್ಡ ಹಾಗೂ ಪರೀಕ್ಷೆಯ ಹಾಲ್ ಟಿಕೇಟ್ (Admit card) ತೆಗೆದುಕೊಂಡು ಬರಲು ಅನುಮತಿ ಇರುತ್ತದೆ.
ದಿನಾಂಕ 05/04/2026 ರಂದು TMA Pai ಪೊಲೀಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನಡೆಸುವ ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ಪೊಲೀಟೆಕ್ನಿಕ್ ಕಾಲೇಜಿನ ION Degital Zone IDZ Milk Dairy ಮಣಿಪಾಲದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಉತ್ತರಖಂಡ ಮೂಲದ ವಿದ್ಯಾರ್ಥಿ ಪರೀಕ್ಷೆಯ ಸಮಯ ತನ್ನ ಮೊಬೈಲ್ ಪೋನ್ ಬಳಸಿ ಪರೀಕ್ಷಾ ಹಾಲ್ ನಲ್ಲಿ ಕಂಪ್ಯೂಟರ್ ಸಿಸ್ಟಮ್ ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ಆತನ ಮೊಬೈಲಿನಿಂದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸಂಪೂರ್ಣ ಪೋಟೋ ತೆಗೆದು ಅದನ್ನು ಹೊರಗಡೆ ಕಳುಹಿಸಿ ಪ್ರಸಾರ ಮಾಡಲು ಯತ್ನಿಸಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2026 ಕಲಂ: 03,04,10 The public Examinations (Prevention of unfair means )Act 2024 ರಂತೆ ಪ್ರಕರಣ ದಾಖಲಾಗಿರುತ್ತದೆ.

