ಕುಂದಾಪುರ: ಕುಂದಾಪುರದ ಖಾರ್ವಿಕೇರಿ ನಿವಾಸಿಯಾದ ರಾಘವೇಂದ್ರ ಶೇರುಗಾರ್ ಯಾನೆ ಬನ್ಸ್ ರಾಘು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಕುಂದಾಪುರ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ಇಂದು ಬೆಳಿಗ್ಗೆ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ
ಬಂಧಿತರನ್ನು ಶಿವಮೊಗ್ಗದ ಬುದ್ಧ ನಗರದ ನಿವಾಸಿಗಳಾದ ಶಾಫಿ ಯಾನೆ ಸೈಫುಲ್ಲ (40 ವರ್ಷ) ಹಾಗೂ ಆರ್ ಎಂ ಎಲ್ ನಗರದ ಇಮ್ರಾನ್(42 ವರ್ಷ) ಎಂದು ತಿಳಿದುಬಂದಿದೆ ಸೈಫುಲ್ಲ ಎಂಬವನು ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು ಈತನ ಮೇಲೆ 8 ಕ್ರಿಮಿನಲ್ ಕೇಸುಗಳಿವೆ
ಇಂದು ಬೆಳಿಗ್ಗೆ ಆರೋಪಿಗಳನ್ನು ಕುಂದಾಪುರ ಪೊಲೀಸರುನಗರದ ಸರಕಾರಿ ಆಸ್ಪತ್ರೆಗೆ ಕರೆತಂದು ವೈದೈಕೀಯ ತಪಾಸಣೆಗೆ ಒಳಪಡಿಸಿದರು ಈ ಸಂದರ್ಭದಲ್ಲಿ ಪೊಲೀಸ್ ನಿರೀಕ್ಷಕರಾದ ನಂದಕುಮಾರ್ ಹಾಗೂ ಠಾಣಾಧಿಕಾರಿ ಪ್ರಸಾದ್ ಉಪಸ್ಥಿತರಿದ್ದರು
ನಂತರ ಆರೋಪಿಗಳನ್ನು ಕುಂದಾಪುರದ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ 3 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿದೆ