ಉಡುಪಿ: RTO ಹೆಸರಿನಲ್ಲಿ ನಕಲಿ ‘Traffic Violation Notice’ ಮೆಸೇಜ್ ಕಳುಹಿಸಿ ವ್ಯಕ್ತಿಯೊಬ್ಬರಿಂದ ₹3 ಲಕ್ಷಕ್ಕೂ ಅಧಿಕ ಹಣವನ್ನು ಆನ್‌ಲೈನ್ ಮೂಲಕ ವಂಚಿಸಿರುವ ಘಟನೆ ನಡೆದಿದೆ.
ಸೆಪ್ಟೆಂಬರ್ 20ರಂದು ಬೆಳಿಗ್ಗೆ 11.52ರ ಸುಮಾರಿಗೆ 52 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ವಾಟ್ಸಪ್ ಪರಿಶೀಲಿಸುತ್ತಿದ್ದ ವೇಳೆ, ಅಪರಿಚಿತ ವ್ಯಕ್ತಿಯೊಬ್ಬರು ‘Coaching Center’ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದರು.
ಸಂದೇಶದಲ್ಲಿ ಪಿರ್ಯಾದಿದಾರರ ಕಾರಿನ ನೋಂದಣಿ ಸಂಖ್ಯೆಯನ್ನು ನಮೂದಿಸಿ, ₹1,000 ದಂಡ ಪಾವತಿಸುವಂತೆ ‘Traffic Violation Notice’ ನೀಡಲಾಗಿತ್ತು.ಪ್ರವಾಸ ಮಾರ್ಗದರ್ಶಿ ಖರೀದಿಸಿ
ಸಂದೇಶದಲ್ಲಿದ್ದ ಲಿಂಕ್‌ನ್ನು ಪಿರ್ಯಾದಿದಾರರು ಕ್ಲಿಕ್ ಮಾಡಿದಾಗ ‘mParivahan’ ಹೆಸರಿನ ಆ್ಯಪ್ ಡೌನ್‌ಲೋಡ್ ಆಗಿದೆ. ಇದಾದ ಬಳಿಕ ಅವರ ಉಳಿತಾಯ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹3,00,353.69 ಹಣವನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾಯಿಸಲಾಗಿದೆ.
RTO ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಟ್ರಾಫಿಕ್ ದಂಡದ ಸಂದೇಶ ಕಳುಹಿಸಿ, ಲಿಂಕ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಸಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡಿರುವುದಾಗಿ ಪಿರ್ಯಾದಿದಾರರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆನ್‌ಲೈನ್ ವಂಚನೆ ನಡೆಸಿದ ಅಪರಿಚಿತ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಮುಂದುವರಿಸಿದ್ದಾರೆ.
