Home » ಬಸ್ ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ
 

ಬಸ್ ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ

by Kundapur Xpress
Spread the love

ಬಂಟ್ವಾಳ : ಐದು ತಿಂಗಳ ಹಿಂದೆ ಹೋಟೇಲ್ ಬಳಿ ನಿಲ್ಲಿಸಿದ್ದ ಬಸ್ ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ .

ಬಂಧಿತ ಆರೋಪಿಯನ್ನು ಮಧ್ಯಪ್ರದೇಶದ ನಿವಾಸಿ ಸಮದ್ ಖಾನ್ (37) ಎಂದು ಹೆಸರಿಸಲಾಗಿದೆ.

2025 ರ ನವೆಂಬರ್ 19 ರಂದು ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವನ ಸಮುದ್ರ ಹೋಟೆಲ್ ಬಳಿ ನಿಲ್ಲಿಸಿದ್ದ ದುರ್ಗಾಂಬಾ ಬಸ್ ನಲ್ಲಿ ಬ್ಯಾಗಿನೊಳಗೆ ಇರಿಸಲಾಗಿದ್ದ ಬ್ರಹ್ಮಾವರ ಮೂಲದ ದಂಪತಿಗಳು ರೂಪಾಯಿ 20 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ ಕಳವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಆತನನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

 

Related Articles

error: Content is protected !!