Home » ಬಸ್ರೂರು ಸಾಂಸ್ಕ್ರತಿಕ ವೈಭವ
 

ಬಸ್ರೂರು ಸಾಂಸ್ಕ್ರತಿಕ ವೈಭವ

by Kundapur Xpress
Spread the love

ಬಸ್ರೂರು ಸಾಂಸ್ಕ್ರತಿಕ ವೈಭವ

ಕುಂದಾಪುರ : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ಶಾರದ ಸಂಗೀತ ಮತ್ತು ಲಲಿತಕಲಾ ಆಕಾಡೆಮಿ (ರಿ) ಬಸ್ರೂರು ಇವರ ಸಂಯುಕ್ತ ಆಶ್ರಯದಲ್ಲಿ ದಿ.ನಾಗರತ್ನ ಹಗ್ಡೆ ಯವರ ವೇದಿಕೆಯಲ್ಲಿ ನೃತ್ಯ ಸಂಗೀತ ಸಂಗಮ ಎಂಬ ಸಾಂಸ್ಕ್ರತಿಕ ಕಾರ್ಯಕ್ರಮವು ನೆರವೇರಿತುಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಬಿ ಅಪ್ಪಣ್ಣ ಹೆಗ್ಡೆಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಭಾಂಡ್ಯ ಎಜುಕೇಶನಲ್‌ ಟ್ರಸ್ಟ್‌ ನ ಜಂಟಿ ಕಾರ್ಯನಿರ್ವಾಹಕಿಯಾದ ಅನುಪಮಾ ಎಸ್‌ ಶೆಟ್ಟಿ ವಿದ್ವಾನ್‌ ಎಚ್‌ ಅನಂತ ಭಟ್‌  ಧ.ಗ್ರಾ. ಯೋಜನೆಯ ಹರೀಶ್‌  ಹಾಗೂ ಲಲಿತಕಲಾ ಆಕಾಡೆಮಿಯ ಅಧ್ಯಕ್ಷರಾದ ಬಿ.ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು

ಸನಾತನಿ ನಾಟ್ಯ ಕಲಾಲಯ ಕಲಾನಿಕೇತನ ಬಸ್ರೂರು ಹಾಗೂ ಕಲಾಶ್ರೀ ಪುನೀತ್‌ ಇವರ ಶಿಷ್ಯರಿಂದ ನಾಟ್ಯ ವೈಭವ ನಡೆಯಿತು ನರಸಿಂಹ ಪೂಜಾರಿ ಹಾಗೂ ಕೋಣಿ ಸುಬ್ಬಣ್ಣ ನವರು ಕಾರ್ಯಕ್ರಮ ನಿರೂಪಿಸಿದರು

 

Related Articles

error: Content is protected !!