ಕುಂದಾಪುರ : ನಗರದ ಯುವ ಮಿತ್ರ ವೃಂದದ 30ನೇ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡೋತ್ಸವ ಕಾರ್ಯಕ್ರಮವು ಶ್ರೀ ವೆಂಕಟರಮಣ ಶಾಲೆಯ ಮೈದಾನದಲ್ಲಿ ಇಂದು ನಡೆಯಲಿದೆ. ಕ್ರೀಡಾಕೂಟವನ್ನು ಶ್ರೀ ವೆಂಕಟರಮಣ ಶಾಲೆಯ ಮೈದಾನದಲ್ಲಿ ಇಂದು ಬೆಳಿಗ್ಗೆ 9:00 ಗಂಟೆಗೆ ಉದ್ಘಾಟಿಸಲಾಗುವುದು ಎಂದು ಯುವ ಮಿತ್ರ ವೃಂದದ ಅಧ್ಯಕ್ಷರಾದ ಅಮರ್ ತಿಳಿಸಿದ್ದಾರೆ
ಕಾರ್ಯಕ್ರಮವನ್ನು ಶ್ರೀ ವೆಂಕಟರಮಣ ಶಾಲೆಯ ಸಂಚಾಲಕರಾದ ಶ್ರೀಯುತ ರಾಧಾಕೃಷ್ಣ ಶೆಣೈ ಉದ್ಘಾಟಿಸಲಿದ್ದು, ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ನಾಗರಾಜ ಕಾಮಧೇನು ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿಯವರು, ಕುಂದಾಪುರ ಪುರಸಭಾ ಅಧ್ಯಕ್ಷರಾದ ಶ್ರೀಯುತ ಮೋಹನ್ ಶೆಣೈ ಮತ್ತು ಪಡುಕೇರಿ ಒಂಬತ್ತುದಂಡಿಗೆ ಕೌನ್ಸಿಲರಾದ ಶ್ರೀಮತಿ ಅಶ್ವಿನಿ ಪ್ರದೀಪ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಯುವ ಮಿತ್ರ ವೃಂದದ ಅಧ್ಯಕ್ಷ ಶ್ರೀಯುತ ಅಮರ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಕಾರ್ಯದರ್ಶಿ ಶ್ರೀಯುತ ಮಹೇಶ್, ಖಜಾಂಚಿ ಶ್ರೀಯುತ ಸಂಪತ್, ಕ್ರೀಡಾ ಕಾರ್ಯದರ್ಶಿ ಶ್ರೀಯುತ ನಾಗರಾಜ ಮೆಟ್ರೋ ಹಾಗೂ ಇನ್ನಿತರ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸೆಲ್ಫಿ ಕೌಂಟರನ್ನು ತೆರೆಯಲಾಗಿದೆ. ಕ್ರೀಡಾಸ್ಫೂರ್ತಿಯ ಜೊತೆ ಮನೋರಂಜನೆಯಲ್ಲೂ ಪಾಲ್ಗೊಳ್ಳುವ ಎಲ್ಲ ಕ್ರೀಡಾಳುಗಳಿಗೂ ಸ್ಮರಣೀಯ ಅನುಭವ ನೀಡಲಿದೆ ಎಂದು ಸಂಘಟಕರು ತಿಳಿಸಿದ್ದಾರೆ

