ಕೋಟ: ಪ್ರತಿಯೊಬ್ಬ ವಿದ್ಯಾರ್ಥಿಯೂ ಸಣ್ಣ ಸಣ್ಣ ಕೆಲಸದ ಮೂಲಕ ಪರಿಸರವನ್ನು ಸಂರಕ್ಷಿಸಬಹುದು. ಪ್ಲಾಸ್ಟಿಕ್ ಚೀಲದ ಬಳಕೆಯನ್ನು ಕಡಿಮೆ ಮಾಡುವುದು, ಮನೆಯಲ್ಲಿರುವ ಪ್ಲಾಸ್ಟಿಕ್ ಚೀಲವನ್ನು ಮರುಬಳಕೆ ಮಾಡುವುದು, ಖಾಲಿ ಇರುವ ಜಾಗದಲ್ಲಿ ಗಿಡಗಳನ್ನು ನೆಡುವುದು, ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿಸುವವರು ಮನೆಯಿಂದ ಡಬ್ಬ ತೆಗೆದುಕೊಂಡು ಹೋದರೆ, ಅಲ್ಲಿ ಅನೇಕ ಪ್ಲಾಸ್ಟಿಕ್ ಚೀಲದ ಬೇಡಿಕೆ ಕಡಿಮೆಯಾಗುವುದರ ಮೂಲಕ ಪರಿಸರವನ್ನು ಸಂರಕ್ಷಿಸಬಹುದು ಎಂದು ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಇಕೋ ಕ್ಲಬ್‍ನ ವಿಶ್ವಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಕುಂಜಾಲ ವಿಕೆಆರ್ ಶಾಲೆಯ ನಿವೃತ್ತ ವಿಜ್ಞಾನ ಅಧ್ಯಾಪಕ ಬಾಲಗಂಗಾಧರ ಶೆಟ್ಟಿ ಮಾಹಿತಿ ನೀಡಿದರು. ಹಿರಿಯ ಶಿಕ್ಷಕ ವೆಂಕಟೇಶ ಉಡುಪ ವಂದನಾರ್ಪಣೆಗೈದರು. ಇಕೋ ಕ್ಲಬ್‍ನ ಸಂಚಾಲಕಿ ಶ್ರೀಮತಿ ನಾಗರತ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಸ್ವಾಗತಿಸಿದರು.ಇಕೋ ಕ್ಲಬ್‍ನ ಅಧ್ಯಕ್ಷ ನಿಧೀಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು.ಅರುಷ್ ಪ್ರಾಥಿಸಿದರು.