ಬಸ್ರೂರು : ಪೋರ್ಚುಗೀಸರ ವಿರುದ್ದ ಛತ್ರಪತಿ ಶಿವಾಜಿ ಮಹಾರಾಜರು ಪ್ರಥಮ ನೌಕಾಯಾನ ಕೈಗೊಂಡು ಬಸ್ರೂರಿನಲ್ಲಿ ವಿಜಯ ಪತಾಕೆ ಹಾರಿಸಿದ ಫೆ. 13 ರಂದು ಬಸ್ರೂರು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.ಆ ಘಟನೆ ನಡೆದು 359 ವರ್ಷಗಳೇ ಸಂದಿದ್ದು, ಅದರ ಅಂಗವಾಗಿ ಇಂದು ಸಂಜೆ 5.00 ಕ್ಕೆ ಬಸ್ರೂರು ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ಬಸೂರಿನ ಛತ್ರಪತಿ ಶಿವಾಜಿ ಅಭಿಮಾನಿ ಬಳಗದ ವತಿಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಭೆಗೂ ಮುನ್ನ ಬಸ್ರೂರು ಮಂಡಿಕೇರಿಯಿಂದ ವೈಭವದ ಮೆರವಣಿಗೆ ನಡೆಯಲಿದ್ದು ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುಣೆಯ ಡಾ| ಸಂದೀಪ್ ರಾಜ್ ಮಹಾದೇವ್ ರಾವ್ ಮಹಿಂದ್ ಆಗಮಿಸಲಿದ್ದು, ದಿಕ್ಕೂಚಿ ಭಾಷಣವನ್ನು ಆರೆಸ್ಸೆಸ್ ದಕ್ಷಿಣ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಡಾ। ಕಲ್ಲಡ್ಕ ಪ್ರಭಾಕರ ಭಟ್ ಮಾಡಲಿದ್ದಾರೆ.ಸಭಾ ಕಾರ್ಯಕ್ರಮದ ಬಳಿಕ ಜಗದೀಶ ಆಚಾರ್ಯ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಶಿವಾಜಿ ಅಭಿಮಾನಿ ಬಳದ ಅಧ್ಯಕ್ಷರಾದ ಉಮೇಶ್ ಆಚಾರ್ ತಿಳಿಸಿದ್ದಾರೆ