ಕುಂದಾಪುರ : ಪುರಸಭಾ ಅಧಿಕಾರಿಗಳೇ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿರುವ ಅದರಲ್ಲೂ ನಗರದ ಹೃದಯಭಾಗವಾದ ಶಾಸ್ತ್ರೀಪಾರ್ಕ್ ಬಳಿಯಲ್ಲಿರುವ ಬಿವಿಯಸ್ ರಸ್ತೆಯನ್ನು ಒಮ್ಮೆಯಾದರೂ ನೋಡಿದ್ದೀರಾ….. ಅಥವಾ ಕೇಳಿದ್ದೀರಾ…..? ನೀವು ಕೇಳಿರಲೇಬೇಕು ಎಕೆಂದರೆ ಬಿವಿಯಸ್ ರಸ್ತೆಯ ನಿವಾಸಿಗಳು ರಸ್ತೆಯ ದುರವಸ್ಥೆಗಳ ಬಗ್ಗೆ ನಿಮಗೆ ಸಲ್ಲಿಸಿದ ಮನವಿ ಅಷ್ಟಿಷ್ಟಲ್ಲಿ ಅದಕ್ಕೆಲ್ಲಾ ನೀವು ಕಿವಿಗೊಡದೇ ಮೌನವಾಗಿದ್ದೀರಿ ಏಕೆ….?
ಇನ್ನಾದರೂ ತಡಮಾಡದೇ ರಸ್ತೆಯ ದುರವಸ್ಥೆಯನ್ನು ನೋಡಿ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸ್ವಲ್ಪವಾದರೂ ಪ್ರಾಮಾಣಿಕ ಪ್ರಯತ್ನ ಮಾಡಿ
ನಗರದ ಬಿವಿಯಸ್ ರಸ್ತೆಯಲ್ಲಿ ರಾಮಕೃಷ್ಣ ಆಸ್ಪತ್ರೆ ಹಾಗೂ ವೃದ್ದಾಶ್ರಮವಿದ್ದು ರಸ್ತೆ ಸಂಪೂರ್ಣ ಜಖಂಗೊಂಡು ಎರಡು ವರ್ಷವೇ ಕಳೆದಿದೆ ಶಾಲಾ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ರಸ್ತೆಯ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ ರಸ್ತೆ ಬದಿಯ ಚರಂಡಿಗಳು ಮಾಯವಾಗಿದ್ದು ಅಲ್ಲಲ್ಲಿ ಕಸದ ರಾಶಿಗಳಿಂದ ದುರ್ನಾತ ಬರುತ್ತಿದೆ ಕುಂದಾಪ್ರದಲ್ಲಿರುವ ವಲಸೆ ಕಾರ್ಮಿಕರಿಗೆ ಮಲ ಮೂತ್ರ ವಿಸರ್ಜನೆಗೆ ಇದೊಂದು ಪ್ರಶಾಂತ ಸ್ಥಳವಾಗಿದೆ ಇದರ ಗಬ್ಬು ವಾಸನೆಯಿಂದ ಸಂಚರಿಸುವ ಸಾರ್ವಜನಿಕರು ಆಕ್ರೋ ಶ ವ್ಯಕ್ತಪಡಿಸುತ್ತಿದ್ದಾರೆ
ನಗರದ ಶಾಸ್ತ್ರೀಪಾರ್ಕ್ ನಿಂದ ಕಲ್ಲಾಗಾರ ಸಂಪರ್ಕಿಸುವ ಈ ರಸ್ತಗೆ ದಯವಿಟ್ಟು ಒಂದು ಮುಕ್ತಿ ಕಾಣಿಸಿ ಎಂದು ಪರಿಸರದವರ ಒಕ್ಕೋರಲದ ಆಗ್ರಹವಾಗಿದ್ದು ಇನ್ನಾದರೂ ಅತೀ ಶೀಘ್ರದಲ್ಲಿ ಈ ರಸ್ತೆಯನ್ನು ದುರಸ್ತಿಪಡಿಸಲಿ ಎಂಬುದೇ ನಮ್ಮ ಆಶಯ
ಕೆ. ಗಣೇಶ್ ಹೆಗ್ಡೆ ,ಕುಂದಾಪುರ

