ಕೋಟ : ಜನಸಮಾನ್ಯರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಬೇಕು ಈ ಮೂಲಕ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆಯನ್ನು ಸರಿದೂಗಿಸಲು ಸಾಧ್ಯವಿದೆ ಎಂದು ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿ ಜಯಕರ ಶೆಟ್ಟಿ ಹೇಳಿದರು.
ಕೋಟದ ಜನತಾ ಸಂಸ್ಥೆಯ ಆವರಣದಲ್ಲಿ ಜನತಾ ಸಮೂಹ ಸಂಸ್ಥೆಗಳ ಸಿಬ್ಬಂದಿವರ್ಗ ಆಯೋಜಿಸಿದ ಸಂಸ್ಥೆಯ ಮುಖ್ಯಸ್ಥ ಆನಂದ್ ಸಿ ಕುಂದರ್ ಇವರ 77ನೇ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಒರ್ವ ಸಮಾಜ ಸೇವಕನ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನಾರ್ಹ ಕಾರ್ಯವಾಗಿದೆ.ಆನಂದ್ ಸಿ ಕುಂದರ್ ಜಿಲ್ಲೆಗೆ ಮಾತ್ರ ಸೀಮಿತಗೊಳ್ಳದೆ ರಾಜ್ಯ ಮಟ್ಟದಲ್ಲಿ ತನ್ನದೆ ಆದ ವ್ಯಕ್ತಿತ್ವವನ್ನು ಪಸರಿಸಿಕೊಂಡಿದ್ದಾರೆ ಇಂತಹ ಮಹಾನ್ ಶಕ್ತಿಗಳಿಂದ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಕ್ತದಾನದ ಮಹತ್ವವನ್ನು ತಿಳಿಸಿದರು.
ಆನಂದ್ ಸಿ ಕುಂದರ್ ಮಾತನಾಡಿ ಒಂದು ಯುನಿಟ್ ರಕ್ತದಿಂದ ಮೂರು ಜೀವ ಉಳಿಸಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಆಗಾಗ ರಕ್ತದಾನಗೈಯುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಲಿ ಎಂದರು.
ಇದೇ ವೇಳೆ ಜನತಾ ಸಿಬ್ಬಂದಿಗಳಿAದ ಕೇಕ್ ಕತ್ತರಿಸುವ ಮೂಲಕ 77ನೇ ಹುಟ್ಟುಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.
ಸಭೆಯಲ್ಲಿ ಜನತಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಸುರೇಶ್ ಬಂಗೇರ ರಸ್ತೆ ಅಪಘಾತದಲ್ಲಿ ನಿಧನಹೊಂದಿದ ಹಿನ್ನಲ್ಲೆಯಲ್ಲಿ ಅವರ ಪತ್ನಿಗೆ 2.50ಲಕ್ಷ ರೂಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಜನತಾ ಸಂಸ್ಥೆಗಳ ನಿರ್ದೇಶಕರಾದ ಪ್ರಶಾಂತ್ ಎ ಕುಂದರ್,ರಕ್ಷಿತ್ ಎ ಕುಂದರ್,ಗೀತಾನಂದ ಟ್ರಸ್ಟ್ ನಿರ್ದೇಶಕರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ,ವೈಷ್ಣವಿ ರಕ್ಷಿತ್ ಕುಂದರ್,
ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖರಾದ ಶಿವರಾಮ ಶೆಟ್ಟಿ, ಸತ್ಯನಾರಾಯಣ ಪುರಾಣಿಕ್,ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ ಕುಂದರ್,ಸಿಬ್ಬಂದಿಗಳಾದ ಅಶ್ವಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಗೀತಾನಂದ ಟ್ರಸ್ಟ್ ಸಮಾಜಸೇವಾ ವಿಭಾಗದ ರವಿಕಿರಣ್ ಕಾಂಚನ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು

