Home » ಕೋಟೇಶ್ವರದಲ್ಲಿ ಉಚಿತ ಪುಸ್ತಕ ವಿತರಣೆ
 

ಕೋಟೇಶ್ವರದಲ್ಲಿ ಉಚಿತ ಪುಸ್ತಕ ವಿತರಣೆ

by Kundapur Xpress
Spread the love

ಕೋಟ : ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಪ್ರೇಮಾ ಮತ್ತು ಮಂಜುನಾಥ ಶೆಟ್ಟಿಗಾರ್ ಮತ್ತು ಮಕ್ಕಳು, ಕೋಟೇಶ್ವರ ವಲಯದ87 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆಯನ್ನು ಸಂಘದ ಅಧ್ಯಕ್ಷ ವಕ್ವಾಡಿ ಚಂದ್ರಶೇಖರ ಶೆಟ್ಟಿಗಾರರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್, ಕಾರ್ಯದರ್ಶಿ ಸುರೇಶ್ ಶೆಟ್ಟಿಗಾರ್ ಇಂಜಿನಿಯರ್, ಸಮಾಜದ ಹಿರಿಯರಾದ ನಿವೃತ್ತ ಎ.ಎಸ್.ಐ ಗಣಪಯ್ಯ ಶೆಟ್ಟಿಗಾರ್, ಮಾಜಿ ಅಧ್ಯಕ್ಷರಾದ ವಕ್ವಾಡಿ ಜನಾರ್ಧನ ಶೆಟ್ಟಿಗಾರ್, ಮಾಜಿ ಕೋಶಾಧಿಕಾರಿ ಕೃಷ್ಣಮೂರ್ತಿ ಶೆಟ್ಟಿಗಾರ್, ಗುರಿಕಾರರಾದ ಗೋಪಾಲ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ನಿವೃತ್ತ ಶಿಕ್ಷಕಿ ಇಂದಿರಾ ಗೋಪಾಡಿ ಸ್ವಾಗತಿಸಿದರೆ, ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಉಷಾ ರವೀಂದ್ರ ಶೆಟ್ಟಿಗಾರ್ ಮಾಡಿದರು. ಸಂಘದ ಕಾರ್ಯದರ್ಶಿ ಪ್ರಮೋದ್ ಶೆಟ್ಟಿಗಾರ್ ವರದಿ ಮಂಡಿಸಿದರೆ ಮಾಜಿ ಕಾರ್ಯದರ್ಶಿ ವೆಂಕಟೇಶ ಶೆಟ್ಟಿಗಾರ್ ವಂದಿಸಿದರು.

 

Related Articles

error: Content is protected !!