Home » ಸಚಿವ ರಾಮಲಿಂಗ ರೆಡ್ಡಿರವರ ಆಪ್ತ ಶಂಕರ್ ಶೆಟ್ಟಿ ಕೋಟ ದೇಗುಲಕ್ಕೆ ಭೇಟಿ
 

ಸಚಿವ ರಾಮಲಿಂಗ ರೆಡ್ಡಿರವರ ಆಪ್ತ ಶಂಕರ್ ಶೆಟ್ಟಿ ಕೋಟ ದೇಗುಲಕ್ಕೆ ಭೇಟಿ

by Kundapur Xpress
Spread the love

ಕೋಟ : ಶರನ್ನವರಾತ್ರಿಯ ಐದನೇ ದಿನದಂದು ಇಲ್ಲಿನ ಕೋಟದ ಹಲವು ಮಕ್ಕಳ ತಾಯಿ ಅಮೃತೇಶ್ವರಿ ಅಮ್ಮನ ಸನ್ನಿಧಾನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರದ ಸಾರಿಗೆ, ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿರವರ ಆಪ್ತ ಶಂಕರ್ ಶೆಟ್ಟಿ ರವರು ಕುಟುಂಬ ಸಮೇತವಾಗಿ ದೇವಿಯ ದರ್ಶನ ಪಡೆದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರ ವತಿಯಿಂದ ಶಾಲು ಹೊದಿಸಿ ದೇವರ ಪ್ರಸಾದ ಫಲ ಪುಷ್ಪ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ , ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ , ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರು ವಕ್ತಾರ ವಿಕಾಸ್ ಹೆಗ್ಡೆ, ಕೋಟ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ದಿನೇಶ್ ಬಂಗೇರ ಮತ್ತಿತರರು ಇದ್ದರು.

 

Related Articles

error: Content is protected !!