Home » ಬೈಂದೂರಿನ ಭವಿಷ್ಯದ ಎಲ್ಲಾ ಕಾರ್ಯಕ್ರಮಗಳಿಗೆ ಸಂಜೀವಿನಿ ಬುನಾದಿಯಾಗಬೇಕು- ಗುರುರಾಜ್ ಶೆಟ್ಟಿ ಗಂಟಿ ಹೊಳೆ
 

ಬೈಂದೂರಿನ ಭವಿಷ್ಯದ ಎಲ್ಲಾ ಕಾರ್ಯಕ್ರಮಗಳಿಗೆ ಸಂಜೀವಿನಿ ಬುನಾದಿಯಾಗಬೇಕು- ಗುರುರಾಜ್ ಶೆಟ್ಟಿ ಗಂಟಿ ಹೊಳೆ

by Kundapur Xpress
Spread the love

ಉಡುಪಿ : ಜಿಲ್ಲಾ ಪಂಚಾಯತ್ ನ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿ ಹೊಳೆ ಇವರ ಅಧ್ಯಕ್ಷತೆಯಲ್ಲಿ ಸಂಜೀವಿನಿ ಯೋಜನೆಯ ಪ್ರಗತಿ ಸಭೆ ನಡೆಯಿತು. ಗ್ರಾಮೀಣ ಮಹಿಳೆಯರ ಸಾಮಾಜಿಕ ಸಬಲೀಕರಣಕ್ಕಾಗಿ ಸಂಜೀವಿನಿ ಸ್ವ ಸಹಾಯ ಗುಂಪುಗಳನ್ನು ರಚಿಸಲಾಗಿದೆ.ಈಗಾಗಲೇ ಮಹಿಳೆಯರು ಸಮುದಾಯ ಬಂಡವಾಳ ನಿಧಿ, ಬ್ಯಾಂಕ್ ಸಾಲ, ಇಲಾಖೆಗಳ ಸಾಲ ಸೌಲಭ್ಯ ಪಡೆದು ಸ್ವ ಉದ್ಯೋಗ ಚಟುವಟಿಕೆ ನೆಡೆಸುತ್ತಿದ್ದಾರೆ. ಈ ಮಹಿಳೆಯರನ್ನು ಮಾದರಿಯಾಗಿಸಿ ಪ್ರತಿ ಗ್ರಾಮದ ಸಂಜೀವಿನಿ ಮಹಿಳೆಯರು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯಮಿಗಳನ್ನಾಗಿಸಲು ಸಿಬ್ಬಂದಿಗಳು ಕ್ರಮ ಕೈಗೊಳ್ಳಬೇಕು. ಕೃಷಿ, ಕೃಷಿಯೇತರ, ಪ್ರವಾಸೋದ್ಯಮ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರತಿನಿಧಿಸಬೇಕು. ಇಂದು ಗ್ರಾಮೀಣ ಜನರು ನಿರುದ್ಯೋಗದ ಸಮಸ್ಯೆಯಿಂದ ಬೇರೆ ಕಡೆಗೆ ವಲಸೆ ಹೋಗುತ್ತಿದ್ದಾರೆ ಸ್ಥಳೀಯವಾಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ನಿರ್ಮಾಣವಾಗುವುದರೊಂದಿಗೆ ಭವಿಷ್ಯದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರೇ ನಡೆಸಿಕೊಂಡು ಹೋಗುವಷ್ಟು ಸಬಲರಾಗಬೇಕೆಂದು ಹಾಗೂ ಬೈಂದೂರಿನ ಭವಿಷ್ಯದ ಎಲ್ಲಾ ಕಾರ್ಯಕ್ರಮಗಳಿಗೆ ಸಂಜೀವಿನಿ ಬುನಾದಿ ಯಾಗ ಬೇಕು ಎಂದರು.
ಗ್ರಾಮೋತ್ಸವ ಹಾಗೂ ಬೈಂದೂರು ಉತ್ಸವದಲ್ಲಿ ಸಂಭ್ರಮದಿಂದ ಸಂಜೀವಿನಿ ಗುಂಪಿನವರು ಪಾಲ್ಗೊಳ್ಳಿ:

ಈ ಬಾರಿಯ “ಬೈಂದೂರು ಉತ್ಸವ”ದ ಅಂಗವಾಗಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿ “ಗ್ರಾಮೋತ್ಸವ” ನಡೆಸಲಾಗುತ್ತಿದ್ದು,ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿ ಇಲ್ಲಿ ದೊರಕುವ ಪ್ರಯೋಜನ ಪಡೆಯಬೇಕು. ಬೈಂದೂರು ಉತ್ಸವದಲ್ಲಿ ಸಂಜೀವಿನಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನೂರು ಮಾರಾಟ ಮಳಿಗೆ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸಂಭ್ರಮದಿಂದ ಭಾಗವಹಿಸುವುದರ ಮೂಲಕ ಮುಂದಿನ “ಗ್ರಾಮೋತ್ಸವ”ಸಂಜೀವಿನಿ ಸಂಘ ಗಳೇ ಮುನ್ನಡೆಸುವಷ್ಟು ಮಹಿಳಾ ಸಂಜೀವಿನಿ ಗುಂಪುಗಳು ಸಶಕ್ತವಾಗಬೇಕು ಎಂದರುಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಭಾಯಲ್,ಉಪ ಕಾರ್ಯದರ್ಶಿ ಶ್ಯಾಮ್ ಎಸ್ ಕದ್ರೊಳ್ಳಿ, ಯೋಜನಾ ನಿರ್ದೇಶಕರಾದ ವಿಜಯ್ ಕುಮಾರ್, ನಿವೃತ್ತ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರದ ಅಲಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಹರೀಶ್,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸತೀಶ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಹೇಮಂತ್ ಕುಮಾರ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯ, ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್, ಸೌಮ್ಯ, ಜಿಲ್ಲಾ, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿ, ಬೈಂದೂರು ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟ ಅಧ್ಯಕ್ಷರು, ಮುಖ್ಯ ಪುಸ್ತಕ ಬರಹಗಾರರು, ಕೃಷಿ ಸಖಿ, ಪಶು ಸಖಿ ಉಪಸ್ಥಿತರಿದ್ದರು.

 

Related Articles

error: Content is protected !!