Home » ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವು
 

ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವು

by Kundapur Xpress
Spread the love

ಕುಂದಾಪುರ : ಜಡ್ಕಲ್ ಗ್ರಾಮದ ಹಯ್ಯಂಗಾರು ಹೊಳೆಯಲ್ಲಿ ಈಜಲು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.ಮೃತರನ್ನು ಗೋಳಿಹೊಳೆ ಗ್ರಾಮದ ಅರೆಶಿರೂರು ನಿವಾಸಿ, ರಿಕ್ಷಾ ಚಾಲಕ ಸಂದೀಪ್ ನಾಯ್ಕ (32) ಎಂದು ಗುರುತಿಸಲಾಗಿದೆ.

ಮಾರ್ಚ್ 22ರಂದು ಸ್ನೇಹಿತರೊಂದಿಗೆ ಈಜಲು ತೆರಳಿದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗೋಳಿಹೊಳೆಯ ಹೊಟೇಲ್ ಉದ್ಯಮಿ ಬಾಬಣ್ಣ ಅವರ ಪುತ್ರರಾಗಿದ್ದ ಸಂದೀಪ್ ನಾಯ್ಕ ಅವಿವಾಹಿತರಾಗಿದ್ದು, ತಂದೆ-ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.

 

Related Articles

error: Content is protected !!