ಕೋಟ : ಕೋಟ ಮೆಸ್ಕಾಂ ವ್ಯಾಪ್ತಿಯ ವಿವಿಧ ಭಾಗಗಳ ಹೆದ್ದಾರಿಗಳಲ್ಲಿ ಲೈನ್ ಕೇಬಲ್ ನೆಪದಲ್ಲಿ ಅನಗತ್ಯವಾಗಿ ಮರದ ತಲೆಯನ್ನು ತುಂಡರಿಸಲಾಗುತ್ತಿದೆ ಈ ಬಗ್ಗೆ ಸಾಕಷ್ಟು ಜನಸಂಪರ್ಕ ಸಭೆಯಲ್ಲಿ ಗಮನ ಸೆಳೆಯಲಾಗಿದೆ ಮೆಸ್ಕಾಂ ನಿರ್ಲಕ್ಷೀಯ ಧೋರಣೆ ಅನುಸರಿಸುತ್ತಿದೆ ಎಂದು ಪರಿಸರಪ್ರೇಮಿಗಳು ಆಕ್ರೋಶ ಹೊರ ಹಾಕಿದ ಘಟನೆ ಗುರುವಾರ ನಡೆದಿದೆ.
ಕೋಟದ ಮೆಸ್ಕಾಂ ಉಪವಿಭಾಗ ಇಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಮನೋಹರ್ ಪೂಜಾರಿ ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ತಿಂಗಳ ಹಿಂದೆ ಮರಗಳ ತಲೆಯನ್ನು ಹಾರಿಸಲಾಗಿದೆ ,ಮರದ ಕೊಂಬೆಗಳನ್ನು ತೆಗೆಯಲು ನಮ್ಮ ಆಕ್ಷೇಪಗಳಿಲ್ಲ ಆದರೆ ಅದರ ಬುಡ ಕಡಿಯುವ ಕೆಲಸ ಮಾಡಬೇಡಿ ಪ್ರಸ್ತುತ ಗ್ರೀನ್ ವೇ ನಾಶವಾಗುತ್ತಿದೆ ನಾವು ನಮ್ಮ ಸಂಸ್ಥೆಯ ಮೂಲಕ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡುತ್ತಿದ್ದೇವೆ ನೀವು ಕಡಿದರೆ ಮುಂದಿನ ದಿನಗಳಲ್ಲಿ ಪರಿಸಕ್ಕೆ ಆಪತ್ತು ತಪ್ಪಿದಲ್ಲ ಎಂದು ಇಲಾಖೆಗೆ ಮನವರಿಕೆ ಮಾಡಿದರು.ಇದಕ್ಕೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಧ್ವನಿಗೂಡಿಸಿದರು.
ಈ ಬಗ್ಗೆ ಮಾತನಾಡಿದ ಮೆಸ್ಕಾಂ ಸಹಾಯಕ ಕಾರ್ಯವಾಹಕ ಇಂಜೀನಿಯರ್ ಯಶವಂತ್ ನಮ್ಮಗೂ ಕಾಳಜಿ ಇದೆ ಆದರೆ ಮಳೆಗಾಲದಲ್ಲಿ ಮರಗಳ ಕೊಂಬೆಯಿAದ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದನ್ನು ತೆರವುಗೊಳಿಸಲಾಗುತ್ತಿದೆ,ಮುಂದಿನ ದಿನಗಳಲ್ಲಿ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೆಸ್ಕಾಂ ಸಭೆ ನಿರಸ
ಮೆಸ್ಕಾಂ ಕೋಟ ವ್ಯಾಪ್ತಿಯ ವಿವಿಧ ಭಾಗಗಳ ಸಮಸ್ಯೆಗಳನ್ನು ಪರಿಹಾರಕ್ಕೆ ಸಭೆ ಆಯೋಜಿಸಲಾಗುತ್ತಿದ್ದು ಆದರೆ ಈ ಬಾರಿಯ ಮೆಸ್ಕಾಂ ಸಭೆಯಲ್ಲಿ ಗ್ರಾಹಕರ ಕೊರತೆ ಎದ್ದುಕಾಣುತ್ತಿತ್ತು ಅಲ್ಲದೆ ಮೆಸ್ಕಾಂ ಸಭೆ ನಾಮಾಕಾವಸ್ಥೆಯಲ್ಲಿ ಪೂರ್ಣಗೊಂಡಿತು.
ಮೆಸ್ಕಾA ಉಡುಪಿ ಸಹಾಯ ಅಧೀಕ್ಷಕ ದಿನೇಶ್ ಉಪಾಧ್ಯಾಯ, ಕಾರ್ಯವಾಹಕ ಸಹಾಯಕ ಇಂಜಿನಿಯರ್ ಯಶವಂತ್ , ಕೋಟ ವಿಭಾಗದ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಪ್ರತಾಪಶ್ಚಂದ್ರ ಶೆಟ್ಟಿ, ಸಹಾಯ ಇಂಜಿನಿಯರ್ ಶ್ರೀಕಾಂತ್, ವಿವಿಧ ಶಾಖಾಧಿಕಾರಿಗಳಾದ ಮಹೇಶ್ ,ವೈಭವ್ ಶೆಟ್ಟಿ, ಕೋಟ ಉಪವಿಭಾಗದಲೆಕ್ಕಾಧಿಕಾರಿ ಗಣೇಶ್ ಉಪಸ್ಥಿತರಿದ್ದರು

