Home ಕರಾವಳಿ ಸುದ್ದಿತರಬೇತಿ, ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾದ JFM ಕೃಷ್ಣಮೂರ್ತಿ ಹೈಕಾಡಿಗೆ ‘ಪ್ರೇರಣಾ ಪ್ರಶಸ್ತಿ’

ತರಬೇತಿ, ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾದ JFM ಕೃಷ್ಣಮೂರ್ತಿ ಹೈಕಾಡಿಗೆ ‘ಪ್ರೇರಣಾ ಪ್ರಶಸ್ತಿ’

Prerana Award 2026 Conferred on JFM Krishnamurthy Haikady ಆರೋಹಣ ತರಬೇತಿ ಸಮ್ಮೇಳನ–2026ರಲ್ಲಿ ಪ್ರತಿಷ್ಠಿತ ಗೌರವ

by Kundapur Xpress

ತರಬೇತಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ JFM ಕೃಷ್ಣಮೂರ್ತಿ ಹೈಕಾಡಿ ಅವರಿಗೆ ‘ಪ್ರೇರಣಾ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು. ಸೆ. 27ರಂದು ಭಾನುವಾರ ಮಂಗಳೂರಿನ *ಜೆಪ್ಪು ಪಾಲೆಮಾರ್ ಗಾರ್ಡನ್ನಲ್ಲಿ ನಡೆದ ‘ಆರೋಹಣ ತರಬೇತಿ ಸಮ್ಮೇಳನ–2026’*ರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಂ.ಎ ಬಿ.ಇಡಿ ಪದವೀಧರರಾಗಿರುವ ಇವರು 2018ರಲ್ಲಿ JCI Brahmavara Sevame ಮೂಲಕ JCI ಸೇವಾ ಕ್ಷೇತ್ರಕ್ಕೆ ಪ್ರವೇಶಿಸಿದ ಕೃಷ್ಣಮೂರ್ತಿ ಹೈಕಾಡಿ ಅವರು 2023ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಆ ಅವಧಿಯಲ್ಲಿ 100% Efficiency ಹಾಗೂ Zone ಮಟ್ಟದ ಪ್ರಶಸ್ತಿಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2024ರಲ್ಲಿ JCI Zone Trainer ಆಗಿ ಆಯ್ಕೆಯಾದ ಅವರು, ಬಳಿಕ JCI Shankaranarayana ಘಟಕಕ್ಕೆ ಸೇರಿ ವಿವಿಧ ತರಬೇತಿ ಚಟುವಟಿಕೆಗಳನ್ನು ನಡೆಸಿದ್ದಾರೆ.
ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹಾಗೂ JCI ಸದಸ್ಯರಿಗೆ How to Face Exams, National Youth Day Training, Women Empowerment, Skill Development, Effective Communication, Personality Development, Leadership Development, Goal Setting, Time Management, Self Confidence, Success ಹಾಗೂ Motivation ಸೇರಿದಂತೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದ್ದಾರೆ.
ಇದರೊಂದಿಗೆ National Academy of RUDSETIಯಲ್ಲಿ Domain Skill Trainer ಆಗಿ ಕಾರ್ಯನಿರ್ವಹಿಸುತ್ತಿರುವ ಅವರು, Photography & Videography ಹಾಗೂ Travel and Tour Guide ಕ್ಷೇತ್ರಗಳಲ್ಲಿಯೂ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಯೋಗಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಮೂಲಕ ಉದ್ಯೋಗ ಹಾಗೂ ಸ್ವಯಂ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸುವಲ್ಲಿ ತರಬೇತುದಾರರಾಗಿ ಕೊಡುಗೆ ನೀಡುತ್ತಿದ್ದಾರೆ.
ಅಲ್ಲದೆ Smart Creations Education Trust (R), Haikady ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಹೈಕಾಡಿ ಅವರು ಶಿಕ್ಷಣ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಯುವಜನರ ಕೌಶಲ್ಯಾಭಿವೃದ್ಧಿ, ಶಿಕ್ಷಣ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.
ಛಾಯಾಗ್ರಹಣ ಕ್ಷೇತ್ರದಲ್ಲಿ ವೃತ್ತಿಪರರಾಗಿದ್ದು, JCI ತರಬೇತುದಾರ, RUDSETI Domain Skill Trainer, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಕೃಷ್ಣಮೂರ್ತಿ ಹೈಕಾಡಿ ಅವರ ನಿರಂತರ ಸೇವೆ ಮತ್ತು ತರಬೇತಿ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ‘ಪ್ರೇರಣಾ ಪ್ರಶಸ್ತಿ–2026’ ನೀಡಿ ಗೌರವಿಸಲಾಗಿದೆ.”
ಪ್ರೇರಣಾ ಪ್ರಶಸ್ತಿ -2026 ಪ್ರಶಸ್ತಿಗೆ ಜೆಸಿಐ ಶಂಕರನಾರಾಯಣ ಅಧ್ಯಕ್ಷರು JMF ಯೋಗೀಶ್ ಕಾಂಚನ್ ,ಕಾರ್ಯದರ್ಶಿ .ಸರ್ವಸದಸ್ಯರು ಮತ್ತು ಪೂರ್ವಾಧ್ಯಕ್ಷರು ಸರ್ವಾನುಮತದಿಂದ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಅಭಿನಂದನೆಯನ್ನು ತಿಳಿಸಿದ್ದಾರೆ.

Related Articles

Leave a Comment

This site uses Akismet to reduce spam. Learn how your comment data is processed.