ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀ ಮುರಳಿ ಯವರು (ಉಗ್ರಂ ಚಿತ್ರ ಖ್ಯಾತಿ) ಮತ್ತು ಅಜಯರಾವ್ (ಯುದ್ಧಕಾಂಡ ಚಿತ್ರ ಖ್ಯಾತಿ) ರವರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಪೂಜ್ಯ ಪರ್ಯಾಯ ಯತಿದ್ವಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಎರಡು ಚಿತ್ರನಟರೂ ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ಪಡೆದುಕೊಂಡರು.