Home » ತ್ರಿಶಾ ಸಂಸ್ಥೆ : ದಾಖಲಾತಿ ಆರಂಭ
 

ತ್ರಿಶಾ ಸಂಸ್ಥೆ : ದಾಖಲಾತಿ ಆರಂಭ

ಬಿಕಾಂ ಮತ್ತು ಬಿಸಿಎ ಅಧ್ಯಯನಕ್ಕೆ ವಿದ್ಯಾರ್ಥಿಗಳ ಮೊದಲ ಆಯ್ಕೆ ತ್ರಿಶಾ ಸಂಸ್ಥೆ.

by Kundapur Xpress
Spread the love

ಉಡುಪಿ : ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಪೂರಕವಾಗಿ ರೂಪುಗೊಂಡಿರುವ ಈ ಸಂಸ್ತೆಯಲ್ಲಿ ಕಾಲೇಜು ದಾಖಲಾತಿ ಆರಂಭಗೊಂಡಿದೆ. 1998ರಲ್ಲಿ ಉಡುಪಿಯಲ್ಲಿ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಕೇವಲ 5 ವಿದ್ಯಾರ್ಥಿಗಳಿಂದ ಆರಂಭವಾದ ತ್ರಿಶಾ ಕ್ಲಾಸ್ ಕೋಚಿಂಗ್‌ ಸಂಸ್ಥೆ ತನ್ನ ಅತ್ಯುತ್ತಮ ತರಬೇತಿಯಿಂದ ರಾಷ್ಟ್ರೀಯ ಮಟ್ಟದ ರ್ಯಾಂಕ್‌ಗಳನ್ನು ಗಳಿಸಿಕೊಂಡು ಉಡುಪಿಯ ಜೊತೆಗೆ ಮಂಗಳೂರು, ಬೆಂಗಳೂರಿನಲ್ಲೂ ಕೂಡ ತನ್ನ ಅಂಗ ಸಂಸ್ಥೆಗಳನ್ನು ವೃದ್ದಿಸಿಕೊಂಡಿತು. ರಾಜ್ಯದ ಬೇರೆ ಬೇರೆ ಭಾಗದ ವಿಷಯದ ತಜ್ಞರನ್ನು ಕರೆಸಿ ತರಬೇತಿ ನೀಡುತ್ತಿರುವ ತ್ರಿಶಾ ಸಂಸ್ಥೆ ಸುಮಾರು 80,000ಕ್ಕೂ ಹೆಚ್ವಿನ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದೆ.
ಬಿಕಾಂ ಮತ್ತು ಬಿಸಿಎ ಶಿಕ್ಷಣವನ್ನು ನೀಡುವ ಉದ್ದೇಶದಿಂದ ತ್ರಿಶಾ ಸಂಸ್ಥೆ ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ಕಾಲೇಜುಗಳನ್ನು ಆರಂಭಿಸಿ ಪ್ರಸ್ತುತ ಕರಾವಳಿ ಭಾಗದ ಪ್ರತಿಷ್ಠತ ಕಾಲೇಜುಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳಿಗೆ ಬಿಕಾಂ, ಬಿ.ಸಿ ಎ ವಿದ್ಯಾಭ್ಯಾಸದ ಜೊತೆಗೆ ಸಿಎ, ಸಿಎಸ್, ಎಂಬಿಎ ಪ್ರವೇಶ ಪರೀಕ್ಷೆಗಳು, ಬ್ಯಾಂಕಿಂಗ್ ಪರೀಕ್ಷೆ , ಎ.ಐ ಕೋರ್ಸ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತರಬೇತಿ ನೀಡುತ್ತಿರುವ ಕಾಲೇಜು ತ್ರಿಶಾ ಸಂಸ್ಥೆ ಉಡುಪಿಯ ಕಟಪಾಡಿ ಹಾಗೂ ಮಂಗಳೂರಿನ ಕೊಟ್ಟಾರ ಚೌಕಿಯ ಸುಸಜ್ಜಿತ ಕಟ್ಟಡದಲ್ಲಿ ವಿದ್ಯಾರ್ಥಿಗಳ ಜೀವನಕ್ಕೆ ಅವಶ್ಯಕವಾದ ಮಾನವೀಯ ಮೌಲ್ಯಗಳು ಮತ್ತು ಜೀವನ ಕೌಶಲ್ಯಗಳ ಜೊತೆ ಪಠ್ಯೇತರ ಸಾಹಿತ್ಯ ಕ್ರೀಡಾ ಚಟುವಟಿಕೆಗಳಿಗೆ ಬೆಂಬಲ ನೀಡಲು ಸಾಹಿತ್ಯಿಕ ಸಂಘ, ವಾಣಿಜ್ಯ ಸಂಘಗಳ, ಎನ್‌ಎಸ್‌ಎಸ್, ರೆಡ್ ಕ್ರಾಸ್ ಜೊತೆಗೆ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತಿದೆ.
ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ವಿಶಾಲ ಆಟದ ಮೈದಾನ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯಗಳು ವಾಹನ ಸೌಕರ್ಯಗಳು ಕೂಡ ಲಬ್ಯವಿದೆ.

ವಿದ್ಯಾರ್ಥಿ ವೇತನ: ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿವರ್ಷದಂತೆ, ಕಳೆದ ವರ್ಷ ಸುಮಾರು 40 ಲಕ್ಷ ರೂ. ವಿದ್ಯಾರ್ಥಿವೇತನ ನೀಡಿರುವುದು ವಿದ್ಯಾರ್ಥಿಗಳ ಮೇಲಿನ ಕಾಳಜಿಯನ್ನು ತಿಳಿಸುತ್ತಿದೆ. ಸೈನಿಕರ ಮಕ್ಕಳು ಹಾಗೂ ರೈತರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನ ಲಭ್ಯವಿದೆ.
ವಿದ್ಯಾರ್ಥಿಗಳ ಸಾಧನೆ: ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ತರಬೇತುದಾರರಿಂದ ವಿಶೇಷ ವಿಚಾರ ಸಂಕಿರಣಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುತ್ತಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಶೈಕ್ಷಣಿಕ ಸ್ಪರ್ದೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದಾರೆ. ದಕ್ಷಿಣ ಭಾರತ ಮಟ್ಟದ ಚೆಸ್‌ ಸ್ಪರ್ದೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯನ್ನು ಪ್ರತಿನಿಧಿಸಿದ್ದರು, Weight Lifting ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳು ಕರಾಟೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯನ್ನು ಪ್ರತಿಸಿಧಿಸಿದ್ದು, ಜೊತೆಗೆ ವಿವಿಧ ಕಾಲೇಜುಗಳಲ್ಲಿ ನಡೆಯುವ ಹಲವಾರು ವಾಣಿಜ್ಯ ಸಾಂಸ್ಕೃತಿಕ ಶೈಕ್ಷಣಿಕ ಸ್ಪರ್ಧೆಗಳಿಗೆ ಭಾಗವಹಿಸಿ ಚಾಂಪಿಯನ್‌ ಶಿಪ್‌ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
ಕರಾವಳಿ ಭಾಗದಲ್ಲಿ ತನ್ನ ಚಾಪನ್ನ ಬೀರುತ್ತಿರುವ ತ್ರಿಶಾ ಸಂಸ್ಥೆ ಡೇ ಮತ್ತು ಇವ್ನಿಂಗ್‌ ಕಾಲೇಜ್ ನೊಂದಿಗೆ ರೀಜನಲ್‌ ಯೂತ್‌ ಕಾನ್ಪರೆನ್ಸ್‌ ಸಾಮಾಜಿಕ ಕಾರ್ಯಗಳು ಸ್ವಚ್ಚತಾ ಆಂದೋಲನ ಕನ್ನಡ ಮಾಧ್ಯಮ ಶಾಲೆಗಳ ದತ್ತು ಸ್ವೀಕಾರ, ರಕ್ತದಾನ ಶಿಬಿರ, ಹೀಗೆ ಸಮಾಜಮುಖಿ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿದೆ.
ತ್ರಿಶಾ ಸಂಸ್ಥೆಯ ಡೇ ಮತ್ತು ಇವ್ನಿಂಗ್‌ ಕಾಲೇಜ್ ನ ದಾಖಾಲಾತಿಯ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.

 

Related Articles

error: Content is protected !!