Home » ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ
 

ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ

by Kundapur Xpress
Spread the love

ಕುಂದಾಪುರ: ತಾಲ್ಲೂಕಿನ ತಲ್ಲೂರು ಗ್ರಾಮದ ಕೋಟೆಬಾಗಿನ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮೃತ ಯುವತಿಯನ್ನು ಶಶಿಕಲಾ (20) ಎಂದು ಗುರುತಿಸಲಾಗಿದೆ. ಕುಂದಾಪುರದ ಖಾಸಗಿ ಕ್ಲಿನಿಕ್ ನಲ್ಲಿ ಉದ್ಯೋಗಿಯಾಗಿದ್ದ ಶಶಿಕಲಾ ಸುಮಾರು ಒಂದು ವರ್ಷದ ಹಿಂದೆ ಮಂಜುನಾಥ ಎಂಬುವನೊಂದಿಗೆ ಸಂಪರ್ಕವಿದ್ದು ಆತನನ್ನು ಪ್ರೀತಿಸುತ್ತಿರುವ ವಿಚಾರ ಅವರ ಮನೆಯವರಿಗೆ ತಿಳಿದಿರುತ್ತದೆ.

ಶುಕ್ರವಾರದಂದು ಶಶಿಕಲಾ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿದ್ದು ಸಂಜೆ ಸುಮಾರು 7:00 ಗಂಟೆಯಿಂದ ಮನೆಯಲ್ಲಿ ಕಾಣದೇ ಇದ್ದು ಮನೆಗೆ ಬಾರದೇ ಇದ್ದಾಗ ಅಕ್ಕಪಕ್ಕದಲ್ಲಿ ಹುಡುಕಾಡಿದಾಗ ರಾತ್ರಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬಾವಿಯಲ್ಲಿ ಶಶಿಕಲಾರವರ ಮೃತ ದೇಹ ತೇಲುತ್ತಿದ್ದು ಮನೆಯವರು ಹಾಗೂ ಊರಿನವರು ಸೇರಿ ಮೃತ ಶರೀರವನ್ನು ಮೇಲಕ್ಕೆ ಎತ್ತಿ ಒಂದು ರಿಕ್ಷಾದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ಪರೀಕ್ಷಿಸಿ ಶಶಿಕಲಾ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ: 11/2026 ಕಲಂ: 194 (3)(iv) BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

 

Related Articles

error: Content is protected !!