Home » ನಾಡಿನೆಲ್ಲೆಡೆ ಇಂದು ಸಂಭ್ರಮದ ನಾಗರಪಂಚಮಿ
 

ನಾಡಿನೆಲ್ಲೆಡೆ ಇಂದು ಸಂಭ್ರಮದ ನಾಗರಪಂಚಮಿ

by Kundapur Xpress
Spread the love

ಕುಂದಾಪುರ : ಕರಾವಳಿ ಜಿಲ್ಲೆಗಳು ಸೇರಿದಂತೆ ನಾಡಿನೆಲ್ಲೆಡೆ ಇಂದು ಸಂಭ್ರಮ ಸಡಗರದ ನಾಗರ ಪಂಚಮಿಯ ಆಚರಣೆಯಾಗಲಿದೆ. ನಾಗರಪಂಚಮಿಗೆ ಮುನ್ನಾ ದಿನವೇ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಖರೀದಿ ಭರಾಟೆ ಸೋಮವಾರ ಎಲ್ಲೆಡೆ ಕಂಡುಬಂದಿತ್ತು. 

ಕುಂದಾಪುರದ ಮಾರುಕಟ್ಟೆಯಲ್ಲೂ ಖರೀದಿ ಭರಾಟೆ ಜೋರಾಗಿತ್ತು ತರಕಾರಿ ಅಂಗಡಿಗಳು ಹೂವಿನ ಮಾರುಕಟ್ಟೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು ಆದರೆ, ನಾಗರಪಂಚಮಿ ಹಿನ್ನೆಲೆಯಲ್ಲಿ ದಿಢೀ‌ರ್ ಬೆಲೆ ಏರಿಕೆ ಗ್ರಾಹಕರನ್ನು  ಕಂಗಾಲಾಗಿಸಿತ್ತು.

ಸೀಯಾಳ, ಕೇದಗೆ, ಹಿಂಗಾರ, ಹೂವು, ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿರುವುದು ಕುಂದಾಪುರ ನಗರದಾದ್ಯಂತ ಕಂಡುಬಂತು.

ಬಾಳೆಹಣ್ಣು ಕಜಿ 120 ರಿಂದ 130 ಕೆಂದಾಳಿ ಸೀಯಾಳಕ್ಕೆ 70 ರಿಂದ 80 ದರವಾದರೂ  ಗ್ರಾಹಕರು ಅದರತ್ತ ತಲೆಕೆಡಿಸಿಕೊಳ್ಳದೆ ಖರೀದಿಸಿ ಮನೆಯತ್ತ ಧಾವಿಸುತ್ತಿರುವುದು ಕಂಡುಬಂತು

 

Related Articles

error: Content is protected !!