203
ಉಡುಪಿ ಜಿಲ್ಲೆ ಹೊಸಬರಿಗೆ ಟಿಕೆಟ್
ಕುಂದಾಪುರ : ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಿದ್ದು 4 ರಲ್ಲಿ ಮೂರು ಹೊಸ ಮುಖಗಳಿಗೆ ಟಿಕೆಟ್ ಹಂಚಿಕೆಯಾಗಿದ್ದು ಬೈಂದೂರು ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆ ಇನ್ನು ಕಗ್ಗಂಟಾಗಿಯೇ ಉಳಿದಿದೆ ಹಾಲಿ ಶಾಸಕರಾದ ಸುನಿಲ್ ಕುಮಾರ್ ರವರನ್ನು ಕಾರ್ಕಳ ಕ್ಷೇತ್ರದಲ್ಲೇ ಉಳಿಸಿಕೊಳ್ಳಲಾಗಿದ್ದು
ಉಡುಪಿಗೆ ಯಶ್ ಪಾಲ್ ಸುವರ್ಣ ಹಾಗೂ ಕಾಪು ಕ್ಷೇತ್ರಕ್ಕೆ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಅವಕಾಶ ನೀಡಲಾಗಿದ್ದು ಕುಂದಾಪುರಕ್ಕೆ ನಿರೀಕ್ಷೆಯಂತೆ ಕಿರಣ ಕುಮಾರ್ ಕೊಡ್ಗಿಯವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ

