137
ದಾವಣಗೆರೆ : ಬೆಳ್ಳಿಲೋಟ ಖರೀದಿಗೆಂದು ಚಿನ್ನಾಭರಣ ಅಂಗಡಿಗೆ ಬಂದ ಐವರು ಕಳ್ಳಿಯರ ಗುಂಪು ಬರೋಬ್ಬರಿ 1.13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಘಟನೆ ನಗರದ ಮಂಡಿಪೇಟೆಯಲ್ಲಿ ಗುರುವಾರ ನಡೆದಿದೆ.
ರವಿ ಜ್ಯುವೆಲ್ಲರ್ ಶಾಪ್‌ಗೆ ಐವರು ಬುರ್ಖಾಧಾರಿ ಮಹಿಳೆಯರು ಬಂದಿದ್ದಾರೆ. ಬೆಳ್ಳಿ ಲೋಟ ತೋರಿಸುತ್ತಿದ್ದ ವೇಳೆ ಓರ್ವ ಮಹಿಳೆ 1.13 ಕೋಟಿ ಮೌಲ್ಯದ ಚಿನ್ನದ ಸರ ಕಿವಿಯೋಲೆ, ಜುಮುಕಿಗಳಿದ್ದ ಬಾಕ್ ಅನ್ನು ಬುರ್ಖಾದೊಳಗೆ ಹಾಕಿಕೊಂಡು ಕಾಲ್ಕಿತ್ತಿದ್ದಾಳೆ ನಂತರ ಅಂಗಡಿಯವರು ಸಿಸಿಟೀವಿ ಪರಿಶೀಲಿಸಿದಾಗ ಕೃತ್ಯ ಬಯಲಾಗಿದೆ.

