97
ಕುಂದಾಪುರ :ಕೊಲ್ಲೂರಿನಿಂದ ಭಟ್ಕಳದ ಕಡೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮೂವರನ್ನು ಭಟ್ಕಳ ಮೂಲದ ಅಬ್ರಾರುಲ್ ಹಾಕ್ ಮೋಮಿನ್ (30), ಮೊಹಮ್ಮದ್, ಮೊಹಮ್ಮದ್ ಆರೀಫ್ ಎಂದು ಗುರುತಿಸಲಾಗಿದೆ.
ಮೇ 5ರ ಮುಂಜಾನೆ ಸುಮಾರು 3.30ಕ್ಕೆ ಯಡ್ತರೆ ಜಂಕ್ಷನ್ ಬಳಿ ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ ವಾಹನದಲ್ಲಿ ಅಕ್ರಮವಾಗಿ 10 ಜಾನುವಾರುಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದರು ಹಾಗೂ ಇದಕ್ಕೆ ಬೆಂಗಾವಲು ವಾಹನವಾಗಿದ್ದ ಐಷರಾಮಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

