102
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಾನಾ ಮೂಲದ ಮಹಿಳೆಯಿಂದ ಬರೋಬ್ಬರಿ 38 ಕೋಟಿ ರೂ. ಮೌಲ್ಯದ 3 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಡಿಆರ್‌ಐ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ವಿದೇಶಗಳಿಂದ ಮಾದಕ ವಸ್ತುಗಳು ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ನಿರಂತರವಾಗಿ ಕೊರಿಯರ್ ಮಾದರಿಯಲ್ಲಿ ಸರಬರಾಜಾಗುತ್ತಿದೆ ಎಂದು ಗುಪ್ತಚರ ಇಲಾಖೆ ಡಿಆರ್‌ಐ ಅಧಿಕಾರಿಗಳಿಗೆ ಮುನ್ಸೂಚನೆ ನೀಡಿತ್ತು.
ಆ ಮಾಹಿತಿ ಆಧರಿಸಿ ವಿಶೇಷ ಕಾರ್ಯಾಚರಣೆ ನಡೆಸಿದ ಡಿಆರ್‌ಐ ತಂಡ, ವಿದೇಶದಿಂದ ಆಗಮಿಸುತ್ತಿದ್ದ ಪ್ರತಿಯೊಬ್ಬರ ಮೇಲೂ ವಿಶೇಷ ನಿಗಾ ಇರಿಸಿತ್ತು. ಘಾನಾದಿಂದ ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯ ಮೂಲಕ ಬೆಂಗಳೂರಿಗೆ ಬಂದಿದ್ದ ಈ ಮಹಿಳೆಯನ್ನು ಇದೇ ಮಾದರಿಯಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅನುಮಾನಾಸ್ಪದ ವಸ್ತುಗಳಿರುವುದು ಅಧಿಕಾರಿಗಳಿಗೆ ಗೋಚರಿಸಿದೆ.

