170
ಬೆಂಗಳೂರು : ತಮ್ಮ ಸಂಸ್ಥೆಯ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ (ಬಿಇಎಲ್) ಸಿಬ್ಬಂದಿಯೊಬ್ಬನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ದೀಪ್ ರಾಜ್ ಚಂದ್ರ ಬಂಧಿತ ಆರೋಪಿ.
ಭಾರತದ ರಕ್ಷಣಾ ಪಡೆಗಳಿಗೆ ಸುಧಾರಿತ ಇಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ತಯಾರಿಸುವ ರಕ್ಷಣಾ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಬಿಇಎಲ್ ಸಂಸ್ಥೆಯ ಮೇಲೆ ಕೇಂದ್ರ ಗುಪ್ತಚರ ಇಲಾಖೆ (ಎನ್ ಐಎ), ಸೇನಾ ಗುಪ್ತಚರ ಸಂಸ್ಥೆ ಹಾಗೂ ರಾಜ್ಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ದೀಪ್ ರಾಜ್‌ನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಮತ್ತಿಕೆರೆಯಲ್ಲಿ ವಾಸಿಸುತ್ತಿದ್ದ ದೀಪ್ ರಾಜ್ ರಕ್ಷಣಾ ಸಂಬಂಧಿತ ನಿರ್ಣಾಯಕ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ. ಈತ ಬಿಇಎಲ್‌ನ ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ ವಿಭಾಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ

